ಕೊಕ್ಕಡ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ..!

(ನ್ಯೂಸ್ ಕಡಬ)newskadaba.com  ಕೊಕ್ಕಡ, ಏ.01. ಶಿಬಾಜೆ ಗ್ರಾಮದ ಪೆರ್ಲದಲ್ಲಿ  ಮೀನು ವ್ಯಾಪಾರಿಯೊಬ್ಬರು  ಬಾವಿಕಟ್ಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಕ್ಕಡದಲ್ಲಿ ನಡೆದಿದೆ.

ಪೆರ್ಲ ನಿವಾಸಿ ನೋಣಯ್ಯ ಗೌಡ(55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ .

ಹಲವು ಸಮಯದಿಂದ ಶಿಬಾಜೆಯ ಪರಿಸರದಲ್ಲಿ ಹಸಿಮೀನಿನ ವ್ಯಾಪಾರ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಅಂಗವೈಫಲ್ಯ ಹೊಂದಿದ್ದ ಇವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಪಡಲಾಗಿದೆ ಎಂದು ವರದಿ ತಿಳಿಸಿದೆ.

 

error: Content is protected !!
Scroll to Top