ಸಾಮಾಜಿಕ ಜಾಲತಾಣಗಳಲ್ಲಿ ಪೋಟೊ ಹರಿಯಬಿಟ್ಟ ಕಿಡಿಗೇಡಿಗಳು ► ಮಂಗಳೂರಿನ ವಿದ್ಯಾರ್ಥಿನಿಯಿಂದ ಪೊಲೀಸ್ ಕಮಿಷನರ್ ಗೆ ದೂರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.09. ತನ್ನ ಸಹಪಾಠಿಗಳ ಜೊತೆ ನಿಂತ ಗ್ರೂಪ್ ಫೋಟೋಗಳನ್ನು ಫೇಸ್‌ಬುಕ್‌ ನಿಂದ ಕದ್ದ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ತೇಜೋವಧೆ ಮಾಡುತ್ತಿದ್ದಾರೆ ಎಂದು ಕಾಲೇಜು ವಿದ್ಯಾರ್ಥಿನಿಯೋರ್ವಳು ಪೊಲೀಸ್ ಕಮಿಷನರ್ ಗೆ ದೂರು ನೀಡಿದ ಘಟನೆ ಮಂಗಳವಾರದಂದು ನಡೆದಿದೆ.

ನಗರದ ಕಾಲೇಜೊಂದರಲ್ಲಿ ಎಂಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳು ತಾನು ಮುಸ್ಲಿಂ ಸಹಪಾಠಿಯ ಜೊತೆಗೆ ತೆಗೆಸಿಕೊಂಡ ಗ್ರೂಪ್ ಫೋಟೋವನ್ನು ಎಫ್ ಬಿಯಿಂದ ಕದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು, ತೇಜೋವಧೆ ನಡೆಸಿದ “ಅನೈತಿಕ ಪೊಲೀಸರ” ವಿರುದ್ದ ತನ್ನ ತಾಯಿಯ ಜೊತೆಗೆ ಆಗಮಿಸಿ ಮಂಗಳೂರು ಪೊಲೀಸ್ ಕಮೀಷನರ್ ರಿಗೆ ದೂರು ನೀಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾಳೆ.

Also Read  ಟೀಂ ಇಂಡಿಯಾದ ಮುಂದಿನ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ

error: Content is protected !!
Scroll to Top