ಹಿಜಾಬ್ ತೆಗೆಯುವಂತೆ ಮಹಿಳೆಗೆ ಒತ್ತಾಯ..!     ➤ ಏಳು ಮಂದಿ ಅರೆಸ್ಟ್

(ನ್ಯೂಸ್ ಕಡಬ)newskadaba.com  ಚೆನ್ನೈ, ಏ.01. ತಮಿಳುನಾಡಿನ ವೆಲ್ಲೋರ್’ನ ಕೋಟೆ ಸಮುಚ್ಚಯದಲ್ಲಿ ಮಹಿಳೆಯೊಬ್ಬರ ಹಿಜಾಬ್ ಅನ್ನು ತೆಗೆಯುವಂತೆ ಬಲವಂತ ಮಾಡಿದ ಒಬ್ಬ ಅಪ್ರಾಪ್ತನ ಸಹಿತ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

“ಭಾರತೀಯ ದಂಡ ಸಂಹಿತೆ 153ಎ ಮತ್ತು 504 ವಿಧಿಗಳು ಮತ್ತು ತಮಿಳುನಾಡಿನ ಮಹಿಳೆಯರಿಗೆ ಕಿರುಕುಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಒಬ್ಬ ಅಪ್ರಾಪ್ತನ ಸಹಿತ ಏಳು ಮಂದಿಯನ್ನು ಬಂಧಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಮೊಬೈಲ್ ಫೋನ್’ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗೆ ಸೈಬರ್ ವಿಭಾಗಕ್ಕೆ ಕಳುಹಿಸಲಾಗಿದೆ ಎಂದೂ ತಿಳಿಸಿದ್ದಾರೆ.

Also Read  ಪಾರ್ಟಿ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ..!

 

error: Content is protected !!
Scroll to Top