ಮಂಗನ ಕೈಯಲ್ಲಿ ಮಾಣಿಕ್ಯ, ಹುಚ್ಚನ ಕೈಯಲ್ಲಿ ಆಡಳಿತ ► ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಈಶ್ವರಪ್ಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.09. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಇದೀಗ ಸಿಎಂ ಸಿದ್ದರಾಮಯ್ಯರನ್ನು ಹುಚ್ಚ ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಮಿತ್ ಷಾ ರಾಜ್ಯಕ್ಕೆ ಬಂದು ಹೋದ ಮೇಲೆ ರಾಜ್ಯದಲ್ಲಿ ಬೆಂಕಿಯನ್ನು ಹಚ್ಚುವ ಕೆಲಸದಲ್ಲಿ ಕಾಂಗ್ರೆಸ್‌ನವರು ತೊಡಗಿದ್ದಾರೆ ಎಂದಿರುವ ಈಶ್ವರಪ್ಪ, ಸಿದ್ದರಾಮಯ್ಯರವರು ನಾನು ಓರ್ವ ಹಿಂದೂ ಅಂತಾರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಿಂತ ಉತ್ತಮ ಹಿಂದೂ ನಾನು ಅಂತಾರೆ. ಆದರೆ ಮಂಗನ ಕೈಯಲ್ಲಿ ಮಾಣಿಕ್ಯ ಅನ್ನುವ ಹಾಗೆ ಹುಚ್ಚನ‌ ಕೈಯಲ್ಲಿ ಆಡಳಿತ ವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಈಶ್ವರಪ್ಪ ಹರಿಹಾಯ್ದಿದ್ದಾರೆ.

Also Read  SM ಕೃಷ್ಣ ಅವರಿಗೆ 'ಮರಣೋತ್ತರ ಕರ್ನಾಟಕ ರತ್ನ' ನೀಡಲು ಆರ್.ಅಶೋಕ್ ಆಗ್ರಹ

error: Content is protected !!
Scroll to Top