(ನ್ಯೂಸ್ ಕಡಬ)newskadaba.com ತೆಲಂಗಾಣ, ಮಾ.31. ಉಂಗುರ ಕಳೆದುಕೊಂಡಿದ್ದಕ್ಕೆ ಯುವತಿಯೊಬ್ಬಳು ನೊಂದು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ವರದಿಯಾಗಿದೆ.
ಮಾದುಲ ಹೇಮಲತಾ ರೆಡ್ಡಿ (19) ಮೃತ ಯುವತಿ ಎಂದು ಗುರುತಿಸಲಾಗಿದೆ. ಈಕೆ ವಾರಂಗಲ್ನ ಗುನ್ನೆಪಲ್ಲಿ ಗ್ರಾಮದವಳಾಗಿದ್ದು, ಹನುಮಕೊಂಡದ ಡಿಗ್ರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಳು ಎನ್ನಲಾಗಿದೆ.