(ನ್ಯೂಸ್ ಕಡಬ)newskadaba.com ಕರಾವಳಿ, ಮಾ.31. ದಕ್ಷಿಣ ಕನ್ನಡ ಜಿಲ್ಲೆ ಕರಾವಳಿ ಜಿಲ್ಲೆ ಮತ್ತು ಇದು ಯಕ್ಷಗಾನ ಕಲೆಯ ಸಾಂಪ್ರದಾಯಿಕ ಜಾನಪದ ನೃತ್ಯಕ್ಕೆ ಹೆಸರುವಾಸಿಯಾಗಿದೆ. ಯಕ್ಷಕಲೆ ನೃತ್ಯ, ಸಂಗೀತ, ಹಾಡು ಮತ್ತು ಬಣ್ಣದ ವೇಷಭೂಷಣಗಳೊಂದಿಗೆ ವಿದ್ವತ್ ಸಂವಾದದ ಅಪರೂಪದ ಸಂಯೋಜನೆ.
ಕರಾವಳಿ ಜಿಲ್ಲೆಯ ಜನರು ಈ ಸಾಂಪ್ರದಾಯಿಕ ಜಾನಪದ ಕಲೆ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸುವ ಮತದಾರರನ್ನು ಸೆಳೆಯಲು ಯಕ್ಷಕಲೆಯನ್ನು ಬಳಸಿಕೊಳ್ಳಲು ಸ್ವೀಪ್ ತಂಡ ಮುಂದಾಗಿದೆ.