ತರಬೇತಿ ವೇಳೆ ಸೇನಾ ಹೆಲಿಕಾಪ್ಟರ್‌ ಗಳ ನಡುವೆ ಢಿಕ್ಕಿ

(ನ್ಯೂಸ್ ಕಡಬ)newskadaba.com ಯುನೈಟೆಡ್ ಸ್ಟೇಟ್ಸ್‌, ಮಾ.31. ಯುನೈಟೆಡ್ ಸ್ಟೇಟ್ಸ್‌ನಲ್ಲಿ ತರಬೇತಿ ವೇಳೆ ಸೇನಾ ಹೆಲಿಕಾಪ್ಟರ್‌ಗಳ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ತಿಳಿದು ಬಂದಿಲ್ಲ.


ಎಂದಿನಂತೆ ಬುಧವಾರವೂ ಸೇನಾ ಹೆಲಿಕಾಪ್ಟರ್‌ಗಳು ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಆದರೆ ರಾತ್ರಿ ಸುಮಾರು 10 ಗಂಟೆ ವೇಳೆಗೆ ಎರಡು ಎಚ್‌ಎಚ್-60 ಬ್ಲಾಕ್ ಹಾಕ್ ಅಸಾಲ್ಟ್ ನ ಎರಡು ಹೆಲಿಕಾಪ್ಟರ್‌ಗಳ ನಡುವೆ ಢಿಕ್ಕಿ ಸಂಭವಿಸಿದೆ. ಟ್ರಿಗ್ ಕೌಂಟಿಯಲ್ಲಿ ತರಬೇತಿಯಲ್ಲಿದ್ದ ವೇಳೆ ಘಟನೆ ಸಂಭವಿಸಿದೆ.

Also Read  ಪೋಖ್ರಾನ್‌ನಲ್ಲಿ ಸೇನಾ ಕ್ಷಿಪಣಿ ಮಿಸ್‌ಫೈರ್ ➤ ತನಿಖೆಗೆ ಆದೇಶ

error: Content is protected !!
Scroll to Top