ಉಡುಪಿ: ಕಳ್ಳತನವಾದ 34 ಮೊಬೈಲ್‌‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು

(ನ್ಯೂಸ್ ಕಡಬ)newskadaba.com ಉಡುಪಿ, ಮಾ.31. ಕಳ್ಳತನವಾದ ಹಾಗೂ ಕಳೆದು ಹೋಗಿದ್ದ 34 ಮೊಬೈಲ್ ಫೋನ್‌ ಗಳನ್ನು ಪತ್ತೆ ಹಚ್ಚಿ ಆಯಾ ಮಾಲೀಕರಿಗೆ ಹಸ್ತಾಂತರಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.


ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವರದಿಯಾದ ವಿವಿಧ ಪ್ರಕರಣಗಳ ಅಡಿಯಲ್ಲಿ, ಕಳೆದುಹೋದ 34 ಫೋನ್‌ ಗಳನ್ನು ಜಿಲ್ಲಾ ಪೊಲೀಸರು ಪತ್ತೆ ಮಾಡಿದ್ದಾರೆ. ಮೊಬೈಲ್ ಫೋನ್‌ ಗಳು ಕಳ್ಳತನ ಮತ್ತು ನಾಪತ್ತೆಯಾದ ಬಗ್ಗೆ ಸಾರ್ವಜನಿಕರು ಆದಷ್ಟು ಬೇಗ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ. ಮೊಬೈಲ್ ಫೋನ್ ಕಳೆದುಹೋದ ಅಥವಾ ಕಳುವಾದ ಯಾರಾದರೂ ಕೆಎಸ್‌‌ಪಿ ಮೊಬೈಲ್ ಅಪ್ಲಿಕೇಶನ್ ಸೇವೆಯನ್ನು ಬಳಸಿಕೊಳ್ಳಬಹುದು ಮತ್ತು ಅವರ ಮೊಬೈಲ್ ಫೋನ್ ಅನ್ನು ನಿರ್ಬಂಧಿಸಲು ಇ-ಲಾಸ್ಟ್ ದೂರನ್ನು ನೋಂದಾಯಿಸಬಹುದು.

Also Read  ಮಂಗಳೂರು: ಸೌದಿ ಅರೇಬಿಯಾದಲ್ಲಿ ಅಪಘಾತ..! ➤ ಕರಾವಳಿ ಮೂಲದ ಯುವಕ ಮೃತ್ಯು

error: Content is protected !!
Scroll to Top