ಬ್ಯಾಗ್ ​ನಲ್ಲಿದ್ದ ವಿಸ್ಕಿ ಬಾಟಲ್‌ ಮುಕ್ಕಾಲು ಪಾಲು ಖಾಲಿ..!     ➤ ಟ್ವೀಟ್‌ ಮಾಡಿ ಸಂಕಟ ತೋಡಿಕೊಂಡ ವಿಮಾನ ಪ್ರಯಾಣಿಕ

 

(ನ್ಯೂಸ್ ಕಡಬ)Newskadaba.com ಮಾ.31 ವಿಚಿತ್ರ ಘಟನೆಯೊಂದರಲ್ಲಿ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣಿಕನೊಬ್ಬ ತಂದಿದ್ದ ಲಗೇಜ್‌ನಲ್ಲಿ ಪ್ಯಾಕ್ ಮಾಡಲಾಗಿದ್ದ ವಿಸ್ಕಿಯ ಬಾಟಲಿ ಓಪನ್​ ಆಗಿರುವುದಾಗಿ ದೂರು ದಾಖಲಿಸಿದ್ದಾನೆ. ಮಾತ್ರವಲ್ಲದೇ ಮುಕ್ಕಾಲು ಪಾಲು ವಿಸ್ಕಿ ಕೂಡ ಖಾಲಿಯಾಗಿರುವುದಾಗಿ ಹೇಳಿದ್ದಾನೆ.

 

ಟ್ವಿಟರ್‌ನಲ್ಲಿ ಕ್ರಿಸ್ಟೋಫರ್ ಆಂಬ್ಲರ್ ಗ್ಲೆನ್‌ಮೊರಂಗಿ ಎಂಬಾತ ಈ ವಿಷಯ ತಿಳಿಸಿದ್ದಾನೆ. ಶೇರ್​ ಮಾಡಿರುವ ಚಿತ್ರದಲ್ಲಿ, ಸೀಲ್ ತೆರೆದಿರುವುದನ್ನು ನೀವು ಸ್ಪಷ್ಟವಾಗಿ ನೋಡಬಹುದು. ಇದನ್ನು ಪ್ಯಾಕ್ ಮಾಡಿದಾಗ ಹೊಸದಾಗಿ ಮೊಹರು ಮಾಡಲಾಗಿತ್ತು. ಆದರೆ ಈಗ ಸೀಲ್ ತೆರೆಯಲಾಗಿದೆ ಎಂದಿದ್ದಾನೆ. ಇದಕ್ಕೆ 45 ಸಾವಿರ ರೂಪಾಯಿ ಬೆಲೆ ತೆತ್ತಿದ್ದು, ಅದೀಗ ಖಾಲಿಯಾಗಿದೆ ಎಂದಿದ್ದಾನೆ.

Also Read  ಮನೆ, ಪ್ರಾಣ ಹಾನಿ ಪ್ರಕರಣಗಳಲ್ಲಿ 48 ಗಂಟೆಯೊಳಗೆ ಪರಿಹಾರ ಒದಗಿಸುವಂತೆ ಸಿಎಂ ಸೂಚನೆ

 

 

 

error: Content is protected !!
Scroll to Top