ಕಾಸರಗೋಡು: ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಅಪಘಾತ ➤ ಇಬ್ಬರು ಸವಾರರು ಮೃತ್ಯು

(ನ್ಯೂಸ್ ಕಡಬ)newskadaba.com  ಕಾಸರಗೋಡು, ಮಾ.31. ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ನೀಲೇಶ್ವರ ಚಾಯೋತ್ ನ ದೀಪಕ್ (33) ಮತ್ತು ಕನ್ನಾಟಿಪಾರೆಯ ಶೋಭಿತ್ (27) ಮೃತ ಪಟ್ಟವರು ಎಂದು ಗುರುತಿಸಲಾಗಿದೆ.

ದೀಪಕ್ ಖಾಸಗಿ ಬಸ್ಸಿನ ಚಾಲಕರಾಗಿದ್ದರು. ಶೋಭಿತ್ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಸ್ನೇಹಿತರಾಗಿದ್ದ ಇವರು ರಾತ್ರಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ ಎನ್ನಲಾಗಿದೆ.

Also Read  ಸಂಘಪರಿವಾರದ ಸದಸ್ಯರಿಂದ ದನ ಕಳ್ಳತನಕ್ಕೆ ಯತ್ನ ➤ ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು

 

error: Content is protected !!
Scroll to Top