ಉಳ್ಳಾಲ: ಕಳವಾದ ಬೈಕ್-ಮಂಗಳೂರಿನಲ್ಲಿ ಪತ್ತೆ..! ➤ ಮೂವರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.31. ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿಯಿಂದ ಕಳವು ನಡೆಸಿದ್ದ ಬೈಕ್ ಇಂದು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಬೈಕ್ ಮಾಲೀಕರ ಸ್ನೇಹಿತರೊಬ್ಬರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬೈಕ್ ಸಮೇತ ಪಾಂಡೇಶ್ವರ ಠಾಣಾ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.


ಮಾ.28ರ ನಸುಕಿನ ಜಾವ ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿ ಒಳರಸ್ತೆಯಲ್ಲಿ ನಿಲ್ಲಿಸಿದ್ದ ರಾಜೇಶ್ ಎಂಬವರಿಗೆ ಸೇರಿದ ಬೈಕನ್ನು ಕಳ್ಳರು ಕಳವು ನಡೆಸಿದ್ದರು. ಕೃತ್ಯ ಸಿಸಿಟಿವಿಯಲ್ಲಿ ಸೆಎರಯಾಗಿದ್ದು, ಕಳ್ಳನ ಚಹರೆಯೂ ಸರಿಯಾಗಿ ಗೋಚರಿಸಿತ್ತು. ಅದೇ ದಿನದಂದು ತೊಕ್ಕೊಟ್ಟು ಕಾಂಗ್ರೆಸ್ ಕಚೇರಿ ಮುಂಭಾಗದ ಕೊರಗಜ್ಜನ ಕಟ್ಟೆ ಬಳಿ ನಿಲ್ಲಿಸಿದ್ದ ಬೈಕ್ ಕೂಡಾ ಕಳವು ನಡೆದಿತ್ತು. ಅದರ ದೃಶ್ಯ ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಎರಡು ಪ್ರತ್ಯೇಕ ಬೈಕ್ ಕಳವು ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

Also Read  12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..!

error: Content is protected !!
Scroll to Top