ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಹಿಳೆಯ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.30. ಎರಡು ವರ್ಷಗಳ ಹಿಂದೆ 21 ಪವನ್ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲೆಮರೆಸಿಕೊಂಡಿದ್ದ ಮಹಿಳೆಯೋರ್ವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.


ಎಡನೀರು ಚೂರಿಮೊಲೆಯ ಅಲಿಮಾ (44) ಬಂಧಿತ ಮಹಿಳೆ. ಮಡಿಕೇರಿ ಸಮೀಪದಿಂದ ಈಕೆಯನ್ನು ಬಂಧಿಸಲಾಗಿದೆ. 2021ರಲ್ಲಿ ಸೀತಾಂಗೋಳಿ ಮುಗು ರಸ್ತೆಯ ಇಬ್ರಾಹಿಂ ಎಂಬವರ ಮನೆಯಿಂದ ಕಳವು ಮಾಡಲಾಗಿತ್ತು. ಮನೆ ಕೆಲಸಕ್ಕಿದ್ದ ಅಲಿಮಾ ಡಿಡೀರ್ ನಾಪತ್ತೆಯಾಗಿದ್ದರು. ಮನೆಯ ಕಪಾಟಿನಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿತ್ತು.

error: Content is protected !!
Scroll to Top