ವಸತಿ ಸಮುಚ್ಚಯದ 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು.!

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.30 ಯುವಕನೋರ್ವ ವಸತಿ ಸಮುಚ್ಚಯದ 14ನೇ ಮಹಡಿಯಿಂದ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಇಂದು ಮುಂಜಾನೆ ನಗರದ ಕದ್ರಿಯಿಂದ ವರದಿಯಾಗಿದೆ.ಮೊಬೈಲ್ ಕೇರ್ ನ ಜಿ.ಅಬ್ದುಲ್ ಸಲೀಂ ಎಂಬವರ ಪುತ್ರ ಮುಹಮ್ಮದ್ ಶಮಾಲ್(21) ಮೃತಪಟ್ಟವರು.

ಕದ್ರಿಯ ಕೆಪಿಟಿ ಹಿಂಬದಿಯಲ್ಲಿರುವ ಪ್ಲಾನೆಟ್ ಎಸ್.ಕೆ.ಎಸ್. ವಸತಿ ಸಮುಚ್ಚಯದಲ್ಲಿ ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.ರಮಝಾನ್ ಉಪವಾಸದ ಹಿನ್ನೆಲೆಯಲ್ಲಿ ಸಹರಿ ಉಪಾಹಾರ ಸೇವಿಸಿದ ಬಳಿ ಫ್ಲ್ಯಾಟ್ ನ ಬಾಲ್ಕನಿಗೆ ಹೋಗಿದ್ದ ಶಮಾಲ್ ನಿದ್ದೆಗಣ್ಣಿನಲ್ಲಿ ಆಯತಪ್ಪಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಕದ್ರಿ ಠಾಣಾ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Also Read  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

 

 

error: Content is protected !!
Scroll to Top