ಗಂಡ ಸತ್ತಾಗ ಬಿಕ್ಕಿ ಬಿಕ್ಕಿ ಅತ್ತವಳ ಸರಸದಾಟ ಬಯಲು ➤ ಇನಿಯನ ಜೊತೆಗಿನ ಕಾಮದಾಟ ತನಿಖೆಯಲ್ಲಿ ರಿವೀಲ್.!!

(ನ್ಯೂಸ್ ಕಡಬ)newskadaba.com ದಾವಣಗೆರೆ, ಮಾ. 30 ದಾವಣಗೆರೆಯ ರಿಂಗ್ ರಸ್ತೆಯಲ್ಲಿ ಮಹಾಂತೇಶ್(35) ಎಂಬುವವರ ಕೊಲೆ ನಡೆದಿತ್ತು. ಕೊಲೆ ಬಳಿಕ ಶವದ ಮುಂದೆ ಪತ್ನಿ ಶ್ವೇತಾ (27) ಬಿಕ್ಕಿ ಬಿಕ್ಕಿ ಅತ್ತಿದ್ದಳು. ಇದೀಗ ಪೊಲೀಸರ ತನಿಖೆಯಲ್ಲಿ ಶ್ವೇತಾಳ ಸರಸದಾಟ ಬಯಲಾಗಿದ್ದು, ಗೆಳೆಯ ಚಂದ್ರಶೇಖರ್ (28) ಜೊತೆ ಸೆರೆಮನೆ ಸೇರಿದ್ದಾಳೆ.

ಪೊಲೀಸರ ತನಿಖೆ ವೇಳೆ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವ ವಿಚಾರವನ್ನ ಶ್ವೇತಾ ಒಪ್ಪಿಕೊಂಡಿದ್ದಾಳೆ. ಕೊಲೆಯಾದ ಮಹಾಂತೇಶ್ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚವಳ್ಳಿ  ಗ್ರಾಮದ ನಿವಾಸಿಯಾಗಿದ್ದು, ದಾವಣಗೆರೆಯ ಕಟಿಂಗ್ ಶಾಪ್​ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಮದುವೆಯಾದರೂ ಶ್ವೇತಾ ಬಾಲ್ಯದ ಗೆಳೆಯ ಚಂದ್ರಶೇಖರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಚಂದ್ರಶೇಖರ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದನು. ಜೊತೆಯಾಗಿ ಜೀವನ ನಡೆಸಬೇಕು ಅಂದುಕೊಂಡಿದ್ದ ಚಂದ್ರಶೇಖರ್ ಮತ್ತು ಶ್ವೇತಾ ಜೊತೆಯಾಗಿ ಮಹಾಂತೇಶ್​ಗೆ ಚಟ್ಟ ಕಟ್ಟಿದ್ದರು.

Also Read  ಬಂಟ್ವಾಳ: ನಾಳೆ (ನ. 18) ಪುರಸಭಾಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ

 

 

 

 

error: Content is protected !!
Scroll to Top