ಮಂಗಳೂರಿನಲ್ಲೂ ಆರಂಭವಾಯಿತು ಸಂಗೀತ ಕಾರಂಜಿ, ಲೇಸರ್ ಶೋ ► ಕದ್ರಿ ಪಾರ್ಕ್‌ನಲ್ಲಿ ಸಂಗೀತ ಕಾರಂಜಿಗೆ‌ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.09. ಲೇಸರ್ ಶೋ ಹಾಗೂ ಸಂಗೀತ ಕಾರಂಜಿ ನೋಡಬೇಕೆಂದಿದ್ದವರಿಗೆ ಸಂತೋಷದ ಸುದ್ದಿಯೊಂದಿದೆ‌. ಇನ್ಮುಂದೆ ಸಂಗೀತ ಕಾರಂಜಿ ನೋಡಬೇಕಾದಲ್ಲಿ ಮೈಸೂರಿಗೆ ತೆರಳಬೇಕೆಂದಿಲ್ಲ.

ಕರಾವಳಿಯ ಹೃದಯಭಾಗದ ಕದ್ರಿಯಲ್ಲಿರುವ ಕದ್ರಿ ಜಿಂಕೆ ಉದ್ಯಾನವನದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಸಂಗೀತ ಕಾರಂಜಿ, ಲೇಸರ್ ಶೋ, ಪುಟಾಣಿ ರೈಲು ಮೊದಲಾದ ಉದ್ಯಾನವನದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಪಾರ್ಕ್‌ಗೆ ಬರುವ ಪರಿಸರ ಪ್ರೇಮಿಗಳ ಆಸೆಯನ್ನು ನೆರವೇರಿಸಲು ಮಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ಯೋಜನೆಗಳನ್ನು ಹಾಕಿವೆ. ನೂತನವಾಗಿ ಆರಂಭಗೊಂಡಿರುವ ಸಂಗೀತ ಕಾರಂಜಿ, ಲೇಸರ್ ಶೋ, ಪುಟಾಣಿ ರೈಲು ಮೊದಲಾದವುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರದಂದು ಚಾಲನೆ ನೀಡಿದ್ದಾರೆ. ಇನ್ಮುಂದೆ ಸಂಜೆ ಸಮಯದಲ್ಲಿ ಮಂಗಳೂರಿಗೆ ಹೋಗಲಿದ್ದರೆ ಕದ್ರಿ ಪಾರ್ಕ್‌ಗೆ ಹೋಗಿ ಒಂದು ಸುತ್ತು ತಿರುಗಾಡಿಕೊಂಡು ಬನ್ನಿ. ಕರಾವಳಿಯ ಪಾರ್ಕ್‌ನ ಅಂದವನ್ನು ಆಸ್ವಾದಿಸಿ.

Also Read  ಸೆ. 22ರಂದು ಕಾನೂನು ಅರಿವು ಕಾರ್ಯಾಗಾರ

error: Content is protected !!
Scroll to Top