(ನ್ಯೂಸ್ ಕಡಬ)Newskadaba.com ರಷ್ಯಾ: ಮಾ.30 ಉಕ್ರೇನ್ ಮೇಲೆ ನಡೆಸುತ್ತಿರುವ ಆಕ್ರಮಣದ ನಡುವೆಯೇ, ಅಮೆರಿಕ ಸೇರಿ ಪಶ್ಚಿಮದ ರಾಷ್ಟ್ರಗಳು ಈ ಸಂಘರ್ಷದಲ್ಲಿ ನೇರ ಭಾಗಿಯಾಗುವುದರ ವಿರುದ್ಧ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಲು ರಷ್ಯಾ ಅಣ್ವಸ್ತ್ರ ಕ್ಷಿಪಣಿ ಪಡೆಗಳ ತಾಲೀಮು ಆರಂಭಿಸಿದೆ.ಈ ತಾಲೀಮಿನ ಭಾಗವಾಗಿ ಸೈಬೀರಿಯಾದ ಮೂರು ಪ್ರದೇಶಗಳಲ್ಲಿ ಯಾರ್ಸ್ ಅಣ್ವಸ್ತ್ರ ಕ್ಷಿಪಣಿಗಳ ಉಡಾವಣೆಯ ಮೊಬೈಲ್ ಲಾಂಚರ್ ನಿಯೋಜಿಸಲಾಗಿದೆ.
ಯಾರ್ಸ್ ಅಣ್ವಸ್ತ್ರ ಸಜ್ಜಿತ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದು ಸುಮಾರು 11 ಸಾವಿರ ಕಿ.ಮೀ ದೂರದ ಗುರಿ ತಲುಪುತ್ತದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುದ್ಧತಂತ್ರದ ಅಣ್ವಸ್ತ್ರಗಳನ್ನು ಬೆಲಾರೂಸ್ ಮತ್ತು ರಷ್ಯಾದ ನೆರೆಯ ಮತ್ತು ಮಿತ್ರ ರಾಷ್ಟ್ರಗಳ ರಕ್ಷಣೆಗೆ ನಿಯೋಜಿಸುವ ಯೋಜನೆ ಘೋಷಿಸಿದ ಕೆಲವೇ ದಿನಗಳಲ್ಲಿ ಅಣ್ವಸ್ತ್ರ ಕ್ಷಿಪಣಿ ಪಡೆಗಳ ಬೃಹತ್ ತಾಲೀಮು ಆರಂಭವಾಗಿದೆ.