ದೇಶದಾದ್ಯಂತ 9 ಸಾವಿರ ಶಾಲೆಗಳಲ್ಲಿ ಆರಂಭವಾಗಲಿದೆ PM SHRI ಯೋಜನೆ..!!                             

(ನ್ಯೂಸ್ ಕಡಬ)newskadaba.comನವದೆಹಲಿ,ಮಾ.30 ಪ್ರಧಾನಮಂತ್ರಿ ಶ್ರೀ ಎಂಬ ಹೊಸ ಯೋಜನೆಯೊಂದು ಆರಂಭವಾಗಲಿದೆ. ಇದು ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗಳಿಗೆ ಅನ್ವಯ ಆಗಲಿದೆ. ಸರ್ಕಾರಿ ಶಾಲೆಗಳನ್ನು ಸುಧಾರಿತ ಶಾಲೆಗಳಾಗಿ ಪರಿವರ್ತಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಳೆದ ವರ್ಷ ಪ್ರಧಾನ ಮಂತ್ರಿ ಶಾಲೆಗಳ ರೈಸಿಂಗ್ ಇಂಡಿಯಾ ಯೋಜನೆಯನ್ನು ಪ್ರಾರಂಭಿಸಿತು.

ಈ ಯೋಜನೆಯಡಿ ದೇಶಾದ್ಯಂತ 9,000 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ  ಸಚಿವಾಲಯ ಇತ್ತೀಚೆಗೆ ಪ್ರಕಟಿಸಿದೆ. ಆ ಶಾಲೆಗಳ ಹೆಸರನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶಾಲೆಗಳಲ್ಲಿ ಲ್ಯಾಬ್ ಸೌಲಭ್ಯ, ಕ್ರೀಡಾ ಸಾಮಗ್ರಿಗಳು, ಪಠ್ಯಕ್ರಮದ ಪ್ರಕಾರ ಡಿಜಿಟಲ್ ತರಗತಿ ಕೊಠಡಿಗಳು ಮತ್ತು ಕಲಾ ಸ್ಟುಡಿಯೋಗಳನ್ನು ಸ್ಥಾಪಿಸಲಾಗುವುದು. ಅದೇ ಸಮಯದಲ್ಲಿ, ಶಾಲೆಗಳು ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು. ಪರಿಸರವನ್ನು ಸುಧಾರಿಸಿ ಹಸಿರು ಶಾಲೆಗಳಾಗಿ ಪರಿವರ್ತಿಸಬೇಕು ಎಂಬ ಆಶಯ ಇದರದ್ದಾಗಿದೆ.

Also Read  ಕೇರಳ- ಕರ್ನಾಟಕ ಪ್ರಯಾಣ ನಿಷೇಧವಿಲ್ಲ, ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ➤ ಸಚಿವ ಸುಧಾಕರ್

 

 

 

.

 

 

 

 

error: Content is protected !!
Scroll to Top