ಮಂಗಳೂರು: ನಿಷೇಧಿತ ಇ-ಸಿಗರೇಟ್‌ ಮಾರಾಟ ➤ ಐವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.30. ಲಾಲ್‌ ಭಾಗ್‌ನ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಗಳಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ನಿಷೇಧಿತ ಇ-ಸಿಗರೇಟ್‌ ಮತ್ತು ವಿದೇಶಿ ಸಿಗರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಐದು ಮಂದಿಯನ್ನು ಬಂಧಿಸಿದ್ದಾರೆ ಬಂಧಿತರನ್ನು ರೆಹಮತ್ತುಲ್ಲಾ, ಸಂತೋಷ, ಶಿವು ಯಾನೆ ಶಿವಾನಂದ, ಹಸನ್ ಶರೀಫ್, ಇರ್ಷಾದ್ ಎಂದು ಗುರುತಿಸಲಾಗಿದೆ.


ಇ-ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಗಳ ಮೇಲೆ ದಾಳಿ ಒಟ್ಟು 1,50,000 ಮೌಲ್ಯದ 273 ಇ-ಸಿಗರೇಟ್ ಗಳನ್ನು ಹಾಗೂ ಕೊಟ್ಟಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಒಟ್ಟು 5,30,000 ಮೌಲ್ಯದ ಎಚ್ಚರಿಕೆಯ ಚಿಹ್ನೆಯನ್ನು ಅಳವಡಿಸದ ವಿವಿಧ ವಿದೇಶಿ ಕಂಪನಿಗಳ ಸಿಗರೇಟ್ ತುಂಬಿಸ್ರುವ ಪ್ಯಾಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಟ್ಯಾಂಕರ್ ನಿಂದ ಲಿಕ್ವಿಡ್ ಸೋರಿಕೆ ➤ ಸಾರ್ವಜನಿಕರಲ್ಲಿ ಆತಂಕ

error: Content is protected !!
Scroll to Top