ಮೆಕ್ಸಿಕೊ: ವಲಸಿಗರ ಬಂಧನ ಕೇಂದ್ರದಲ್ಲಿ ಭೀಕರ ಅಗ್ನಿದುರಂತ…!!        ➤ ಕನಿಷ್ಠ 37 ಮಂದಿ ಮೃತ್ಯು

(ನ್ಯೂಸ್ ಕಡಬ)Newskadaba.com ಮೆಕ್ಸಿಕೊ: ಮಾ.29  ಮೆಕ್ಸಿಕೊ ದೇಶದ ರಾಜಧಾನಿಯಲ್ಲಿನ ವಲಸಿಗರ ಬಂಧನ ಕೇಂದ್ರದಲ್ಲಿ ರಾತ್ರಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆ.ಮೆಕ್ಸಿಕೊಸಿಟಿಯ ರಸ್ತೆ ಬದಿಗಳಲ್ಲಿ ಬೀಡುಬಿಟ್ಟಿದ್ದ ಸುಮಾರು 71 ವಲಸಿಗರನ್ನು ವಶಕ್ಕೆ ತೆಗೆದುಕೊಂಡು ಬಂಧನ ಕೇಂದ್ರದಲ್ಲಿರಿಸಿದ್ದರು.ಇದಾದ ಕೆಲ ಹೊತ್ತಿನ ಬಳಿಕ ಅಗ್ನಿ ಅವಘಡ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಅಗ್ನಿ ದುರಂತಕ್ಕೆ ಸಂಬಂಧಿಸಿ ಮೆಕ್ಸಿಕೊದ ರಾಷ್ಟ್ರೀಯ ವಲಸೆ ಸಂಸ್ಥೆಯು ತನಿಖೆಯನ್ನು ಆರಂಭಿಸಿದೆ.

ಆದರೆ ಅವಘಡಕ್ಕೆ ಕಾರಣ ಹಾಗೂ ಮೃತಪಟ್ಟವರು ಯಾವ ದೇಶಕ್ಕೆ ಸೇರಿದವರು ಎಂಬ ಬಗ್ಗೆ ಈತನಕ ಅದು ಯಾವುದೇ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಕರ್ತರು ಅಗ್ನಿದುರಂತಕ್ಕೀಡಾದ ಕಟ್ಟಡದ ವಾಹನ ಪಾರ್ಕಿಂಗ್ ಆವರಣದಲ್ಲಿ ಹಲವಾರು ಶವಗಳನ್ನು ಸಾಲಾಗಿ ಇರಿಸಿರುವುದನ್ನು ತಾನು ಕಂಡಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆಯ ವರದಿಗಾರರೊಬ್ಬರು ತಿಳಿಸಿದ್ದಾರೆ.

Also Read  ಬರ ಪರಿಹಾರ ನಿಧಿ ಸಮಸ್ಯೆ: ಕೇಂದ್ರ, ಕರ್ನಾಟಕ ಸರ್ಕಾರವೇ ಬಗೆಹರಿಸಿಕೊಳ್ಳಬೇಕು- ಸುಪ್ರೀಂ ಕೋರ್ಟ್

 

 

 

error: Content is protected !!
Scroll to Top