(ನ್ಯೂಸ್ ಕಡಬ)Newskadaba.com ಬಳ್ಳಾರಿ: ಮಾ.29 ಬಳ್ಳಾರಿ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಕಾಂಗ್ರೆಸ್ನ ಡಿ. ತ್ರಿವೇಣಿ ಆಯ್ಕೆ ಆಗಿದ್ದು, ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ತ್ರಿವೇಣಿ ಪಾತ್ರರಾಗಿದ್ದಾರೆ.ಉಪ ಮೇಯರ್ ಆಗಿ ಕಾಂಗ್ರೆಸ್ನ ಬಿ.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇಯರ್ ಆಯ್ಕೆಗಾಗಿ ಒಟ್ಟು 44 ಮತದಾರರಿಂದ ಮತದಾನ ನಡೆದಿದ್ದು, ಡಿ. ತ್ರಿವೇಣಿ ಪರ 28 ಮತ ಚಲಾವಣೆಯಾದರೆ, ಬಿಜೆಪಿಯಿಂದ ಮೇಯರ್ ಅಭ್ಯರ್ಥಿಯಾಗಿದ್ದ ನಾಗರತ್ನಗೆ ಕೇವಲ 16 ಮತ ಚಲಾವಣೆಯಾಗಿವೆ. ತ್ರಿವೇಣಿ ಅವರಿಗೆ ಕೇವಲ 23 ವರ್ಷ. ರಾಜ್ಯದಲ್ಲೇ ಅತಿ ಚಿಕ್ಕ ವಯಸ್ಸಿನ ಮೇಯರ್ ಆಗಿ ತ್ರಿವೇಣಿ ದಾಖಲೆ ಬರೆದಿದ್ದಾರೆ.