ಔಷಧಗಳ ಬೆಲೆ ಶೇ.12.12ರಷ್ಟು ಹೆಚ್ಚಳ      ➤ ಏಪ್ರಿಲ್ 1ರಿಂದಲೇ ಜಾರಿ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.29. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಇದೀಗ ಏಪ್ರಿಲ್ 1ರಿಂದ ಔಷಧಗಳ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಔಷಧಗಳ ಬೆಲೆಯನ್ನು ಶೇ.12.12ರಷ್ಟು ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು ಅನುಮೋದಿಸಿದೆ.

ಔಷಧಗಳ ಮೇಲಿನ ಬೆಲೆ ಏರಿಕೆಯು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಇನ್ನು ಈವರೆಗೆ ಏರಿಸಲ್ಪಟ್ಟ ಬೆಲೆ ಏರಿಕೆಗಳ ಪೈಕಿ ಇದೇ ಅತ್ಯಧಿಕ ಏರಿಕೆ ಎಂದು ತಿಳಿದು ಬಂದಿದೆ. ಹೃದ್ರೋಗ ಔಷಧ, ನೋವು ನಿವಾರಕ, ಆಂಟಿ ಬಯೋಟಿಕ್, ಗಂಟಲಿಗೆ ಸಂಬಂಧಿಸಿದ ಔಷಧ, ಆಂಟಿ ಫಂಗಲ್, ಆಂಟಿ ಸೆಪ್ಟಿಕ್ ಸೇರಿದಂತೆ ಸುಮಾರು 800 ಔಷಧಗಳ ಬೆಲೆಯಲ್ಲಿ ಏರಿಕೆ ಆಗಲಿದೆ ಎಂದು ವರದಿಯಾಗಿದೆ.

Also Read  ಡಿಕೆಶಿ ಆಸ್ತಿ 5 ವರ್ಷದಲ್ಲಿ ಶೇ.380 ಹೆಚ್ಚಳ ➤ ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ..!!

 

error: Content is protected !!
Scroll to Top