ಪಿಯುಸಿ ಪರೀಕ್ಷೆ ಬೆನ್ನಿಗೇ ಮೂವರು ವಿದ್ಯಾರ್ಥಿಗಳ ಮರಣ..! ➤ ಅದೃಷ್ಟವಶಾತ್ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರು                    

(ನ್ಯೂಸ್ ಕಡಬ)Newskadaba.com ಚಿತ್ರದುರ್ಗ: ಮಾ.29 ಪಿಯುಸಿ ಪರೀಕ್ಷೆ ಮುಗಿದ ಬೆನ್ನಿಗೇ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅದೃಷ್ಟವಶಾತ್, ಜೊತೆಗಿದ್ದ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ನಂದನಹೊಸೂರು ಗ್ರಾಮದ ಸಂಜಯ್ (18), ಎಚ್​.ಡಿ.ಪುರದ ಗಿರೀಶ್ (18) ನಂದನಹೊಸೂರು ಗೊಲ್ಲರಹಟ್ಟಿಯ ಮನು (18) ಸಾವಿಗೀಡಾದವರು.

ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರು ಗ್ರಾಮದ ಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಪಿಯುಸಿ ಪರಿಕ್ಷೆ ಮುಗಿಸಿ ಗ್ರಾಮಗಳಿಗೆ ಮರಳಿದ್ದ ಐವರು ಕೆರೆಗೆ ಈಜಲು ಧುಮುಕಿದ್ದರು. ಗುಂಡಿಕೆರೆ ತುಂಬಾ ಆಳ ಇದ್ದ ಕಾರಣ ದಡ ಸೇರಲು ಸಾಧ್ಯವಾಗಿಲ್ಲ. ಪೋಲಿಸ್ ಇಲಾಖೆ ಮತ್ತು ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Also Read  ಸಿಬಿಐ ಗೆ ಹೊಸ ನಿರ್ದೇಶಕರ ಆಯ್ಕೆ ➤ ಮುಂಚೂಣಿಯಲ್ಲಿದೆ ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ಹೆಸರು

 

 

 

 

 

 

 

 

 

 

 

error: Content is protected !!
Scroll to Top