(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.29. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತೆ ಅಂತ ಹೇಳುವುದು ಕಷ್ಟ. ಏಕೆಂದರೆ ಪುಂಡರು ಎಲ್ಲಿ ಬೇಕಿದ್ದರೂ ಮೋಜು ಮಸ್ತಿ ಮಾಡುತ್ತಾರೆ. ಸರ್ಕಾರಿ ಶಾಲೆ ಆದರೂ ಆಗಬಹುದು, ಆಟದ ಮೈದಾನ ಆದರೂ ಸರಿಯೇ.
ಆದರೆ ಇದೀಗ ಜನ ಓಡಾಡುವ ಸ್ಕೈವಾಕ್ ಕೂಡ ಪುಂಡರ ತಾಣ ಆಗಿದೆ. ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಣಣೆಯಲ್ಲಿ ರಸ್ತೆದಾಟುವುದು ಅಷ್ಟು ಸುಲಭದ ಮಾತಲ್ಲ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಬೇಕು ಎಂದರೆ ಮೇಲ್ಸೇತುವೆಗಳು ಅನಿವಾರ್ಯ. ಮಹಾನಗರ ಪಾಲಿಕೆ ಹಲವಾರು ಸ್ಕೈವಾಕ್ ನಿರ್ಮಿಸಿದೆ. ಇವುಗಳನ್ನು ಜನರು ಕೂಡ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಗರದ ಹೃದಯ ಭಾಗದ ಸ್ಕೈವಾಕ್ ಪರಿಸ್ಥಿತಿ ಮಾತ್ರ ಕೇಳತೀರಾದಾಗಿದೆ ಎಂದು ವರದಿ ತಿಳಿಸಿದೆ.
ಮೆಜೆಸ್ಟಿಕ್ನ ಸಮೀಪದಲ್ಲೇ ಇರುವ ಕೆಜಿ ಸರ್ಕಲ್ ಬಳಿಯ ಸ್ಕೈವಾಕ್ ಸದ್ಯ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಸಂತೋಷ್ ಥಿಯೇಟರ್ ಬಳಿ ಇರುವ ಸ್ಕೈವಾಕ್ ಜನರಿಗೆ ಸದುಪಯೋಗ ಆಗಬೇಕಿತ್ತು, ಆದರೆ ಈಗ ಮೇಲ್ಸೇತುವೆ ಪುಂಡರ ಅಡ್ಡವಾಗಿ ಬದಲಾಗಿದೆ. ಇಲ್ಲಿ ಕಾಂಡೋಮ್, ಮದ್ಯದ ಬಾಟಲಿ, ವೈಟ್ನರ್, ಸಿಗರೇಟ್ ಸೇರಿದಂತೆ ಹಲವು ತ್ಯಾಜ್ಯ ವಸ್ತುಗಳು ಪತ್ತೆಯಾಗಿದೆ.