ದೇವರಿಗೆ ಹಚ್ಚಿಟ್ಟಿದ್ದ ದೀಪದಿಂದ ಮನೆಗೆ ಬೆಂಕಿ..! ➤ ಒಂದೂವರೆ ವರ್ಷದ ಮಗು ಸಜೀವ ದಹನ                        

(ನ್ಯೂಸ್ ಕಡಬ)Newskadaba.com ರಾಜಸ್ಥಾನ,ಮಾ.29   ಘಾಟಾ ಗ್ರಾಮದ ಮನೆಯೊಂದರಲ್ಲಿ ಮಾ.29(ಮಂಗಳವಾರ) ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೂವರೆ ವರ್ಷದ ಮಗು ಸಜೀವ ದಹನವಾಗಿರುವ ಘಟನೆ ನಡೆದಿದೆ.ಹರಿಜನ ಕಾಲೋನಿಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮಗುವನ್ನು ಮನೋಜ್ ಎಂದು ಗುರುತಿಸಲಾಗಿದೆ.ರಾಜಸ್ಥಾನದ ಭರತ್‌ಪುರ ಮೂಲದ ಸತೀಶ್‌ ಕುಮಾರ್‌ ಎಂಬುವವರ ಬಾಡಿಗೆ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಸತೀಶ್‌ ಕುಮಾರ್ ಅವರ ಪತ್ನಿ ಮನೋಜ್‌ನನ್ನು ಒಳಗೆ ಬಿಟ್ಟು, ಹೊರಗಿನಿಂದ ಮನೆಗೆ ಬೀಗ ಹಾಕಿಕೊಂಡು ತನ್ನ ಇನ್ನೊಬ್ಬ ಮಗನನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿದ್ದರು. ಈ ವೇಳೆ ಮನೆಯೊಳಗೆ ದೇವರಿಗೆ ಹಚ್ಚಿಟ್ಟಿದ್ದ ದೀಪವು ಮನೋಜ್ ಆಟವಾಡುತ್ತಿದ್ದ ಹಾಸಿಗೆಯ ಮೇಲೆ ಇದ್ದಕ್ಕಿದ್ದಂತೆ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಇಡೀ ಮನೆಗೆ ಆವರಿಸಿದೆ.

Also Read  10 ತಿಂಗಳ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ ➤ ಸಹಾಯಕ್ಕಾಗಿ ಗೂಗಲ್ ಸರ್ಚ್.?!

 

 

 

 

 

 

error: Content is protected !!
Scroll to Top