ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ         ➤ ಸುಸೈಡ್ ನೋಟ್‌ನಲ್ಲಿ ಸಹಪಾಠಿಯ ಹೆಸರು ಉಲ್ಲೇಖ..!                        

(ನ್ಯೂಸ್ ಕಡಬ)Newskadaba.com ಮುಂಬೈ,ಮಾ.29  ಐಐಟಿ ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ಸುಸೈಡ್ ನೋಟ್‌ನಲ್ಲಿ ತನ್ನ ಓರ್ವ ಸಹಪಾಠಿಯ ಹೆಸರು ಉಲ್ಲೇಖಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿದ್ದಾರೆ.

ದರ್ಶನ್ ಸೋಲಂಕಿ ಫೆಬ್ರವರಿ 12ರಂದು ಹಾಸ್ಟೆಲ್ ಕಟ್ಟಡದ 7ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅಹ್ಮದಾಬಾದ್ ಮೂಲದ, 18 ವರ್ಷದ ಸೋಲಂಕಿ ಐಐಟಿ ಬಾಂಬೆಯಲ್ಲಿ ಮೊದಲ ವರ್ಷದ ತಂತ್ರಜ್ಞಾನ (ರಾಸಾಯನಿಕ)ದ ಪದವಿ ವಿದ್ಯಾರ್ಥಿಯಾಗಿದ್ದ.

 

ಐಐಟಿ ಬಾಂಬೆಯಲ್ಲಿ ಸೋಲಂಕಿ ಜಾತಿ ತಾರತಮ್ಯ ಎದುರಿಸಿದ್ದ ಎಂದು ಆತನ ಕುಟುಂಬ ಪ್ರತಿಪಾದಿಸಿತ್ತು. ಪೊಲೀಸರು ಮಾ.29(ಮಂಗಳವಾರ)ಸೋಲಂಕಿಯ ಹಾಸ್ಟೆಲ್ ಕೊಠಡಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಸುಸೈಡ್ ನೋಟ್ ಪತ್ತೆಯಾಗಿದೆ.

Also Read  ಖ್ಯಾತ ಮಲಯಾಳಂ ನಟ ಬಾಬುರಾಜ್ ಅರೆಸ್ಟ್

 

 

 

 

error: Content is protected !!
Scroll to Top