ಕಲ್ಲಡ್ಕ ಭಟ್ ವಿರುದ್ಧ 307 ಕೇಸ್ ಹಾಕಲು ಸೂಚಿಸಿದ ರಮಾನಾಥ ರೈ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.18. ಕಳೆದ ಕೆಲವು ದಿನಗಳಿಂದ ಕಲ್ಲಡ್ಕ ಪರಿಸರವು ಕೋಮುದ್ವೇಷದಿಂದಾಗಿ ಬೂದಿ ಮುಚ್ಚಿದ ಕೆಂಡದಂತಾಗಲು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೇರ ಕಾರಣ. ಅವರನ್ನು 307 ಸೆಕ್ಷನ್ ಹಾಕಿ ಬಂಧಿಸಿ. ಹೊರಗೆ ಬರದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರಿಗೆ ಸೂಚನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಭಾನುವಾರದಂದು ಬಂಟ್ವಾಳದ ಐಬಿಯಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಕೆಲವು ಮುಸ್ಲಿಂ ಮುಖಂಡರು ಮನವಿಯನ್ನು ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಎಸ್ಪಿಯವರನ್ನು ಸ್ಥಳಕ್ಕೆ ಕರೆಸಿದ ರೈ, ‘ಪ್ರಭಾಕರನನ್ನು ಎರೆಸ್ಟ್ ಮಾಡಿದರೆ ಏನೂ ಆಗುವುದಿಲ್ಲ. ಅವನು ಭಾಷಣ ಮಾಡಿದರೆ ಕ್ರಿಮಿನಲ್ ಕೇಸ್ ಮಾಡಿ. 307 ಕೇಸ್ ಮಾಡಿ. ಅವನು ಹೊರಗೆ ಬಂದ್ರೆ ನಾನು ಹೇಳಿದಂತೆ ಕೇಳುತ್ತೇನೆ. ಅವನು ಅಷ್ಟು ದೊಡ್ಡ ಜನ ಏನೂ ಅಲ್ಲ. ನಾನು ಅವನನ್ನು ಓಡಿಸಿದ್ದೇನೆ ಇಲ್ಲಿ ಬಿ.ಸಿ.ರೋಡಿನಲ್ಲಿ.’ ಎಂದು ಏಕವಚನದಲ್ಲಿ ಹೇಳಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪರ-ವಿರೋಧ ಆಕ್ರೋಶಗಳು ವ್ಯಕ್ತವಾಗುತ್ತಿದೆ.

Also Read  ಆಂಧ್ರದ ಯುವತಿಗೆ ದೌರ್ಜನ್ಯ ಎಸಗಿದ ಪ್ರಕರಣ ➤ ಪುತ್ತೂರಿನ ಆರೋಪಿಯ ಅರೆಸ್ಟ್

error: Content is protected !!
Scroll to Top