ಬಂಟ್ವಾಳ: ಮನೆ ಮಂದಿ ಏರ್‌ಪೋರ್ಟ್‌ಗೆ ತೆರಳಿದ್ದ ವೇಳೆ ಬೀಗ ಮುರಿದು ದರೋಡೆ..!

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮಾ. 29. ವಿದೇಶಕ್ಕೆ ತೆರಳಲಿದ್ದ ಮಗಳನ್ನು ಏರ್‌ಪೋರ್ಟ್‌ಗೆ ಬಿಡಲು ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ನಗ-ನಗದನ್ನು ದೋಚಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ವೀರಕಂಭದಲ್ಲಿ ನಡೆದಿದೆ.

ವೀರಕಂಭ ಬೊನ್ಯಕುಕ್ಕು ಜನತಾ ಕಾಲೋನಿ ನಿವಾಸಿ ಮಹಮ್ಮದ್ ಮುಸ್ಲಿಯಾರ್ ರವರು ಕುಟುಂಬ ಸಮೇತರಾಗಿ ವಿದೇಶಕ್ಕೆ ತೆರಳಲಿದ್ದ ಮಗಳನ್ನು ಮಂಗಳೂರು ಏರ್‌ಪೋರ್ಟ್‌ಗೆ ಬಿಟ್ಟು ಬರಲು ತೆರಳಿದ್ದರು. ಅವರು ಮರಳಿ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿತ್ತಲ್ಲದೇ ಮನೆಯ ಛಾವಣಿಗೆ ಏಣಿ ಇಟ್ಟು ಮನೆಯೊಳಗೆ ನುಗ್ಗಿ ಕಪಾಟಿನ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.

Also Read  ಕೊಂಬಾರು ಮುಗೇರಡ್ಕ ಶಾಲಾ ನೀರಿನ ಸಮಸ್ಯೆಗೆ ಶಾಲಾಭಿವೃದ್ದಿ ಸಮಿತಿಯಿಂದ ಜಿಲ್ಲಾಧಿಕಾರಿಗಳ ಭೇಟಿ.

 

error: Content is protected !!
Scroll to Top