(ನ್ಯೂಸ್ ಕಡಬ)Newskadaba.com ಬೆಂಗಳೂರು: ಮಾ,29 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತ ಪಿಎಸ್‌ಐ ನವೀನ್ ಪ್ರಸಾದ್ ಎಂಬಾತನನ್ನು ಮಂಗಳವಾರ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.ನ್ಯಾಯಾಲಯವು ಏಪ್ರಿಲ್ 6ರ ತನಕ ಸಿಐಡಿ ವಶಕ್ಕೆ ನೀಡಿದೆ.ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ನವೀನ್‌ನನ್ನು ಬಂಧಿಸಲಾಗಿದೆ.
ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈತ 43ನೇ ಆರೋಪಿಯಾಗಿದ್ದು, ಬಂಧಿತರ ಸಂಖ್ಯೆ 110ಕ್ಕೆ ಏರಿಕೆ ಆದಂತಾಗಿದೆ.ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ನವೀನ್ ಅಕ್ರಮ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ಸಿಐಡಿ ತಂಡಕ್ಕೆ ನವೀನ್ ಪಾತ್ರದ ಸುಳಿವು ಲಭಿಸಿದ ಬಳಿಕ ದಿಢೀರ್ ನಾಪತ್ತೆಯಾಗಿದ್ದ. ಆರಂಭದಲ್ಲಿ 10 ವರ್ಷ ಕಾನ್‌ಸ್ಟೆಬಲ್ ಆಗಿದ್ದ ನವೀನ್, ಪಿಎಸ್‌ಐ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದ ಎಂದು ಮೂಲಗಳು ಹೇಳಿವೆ.