ಶಬರಿಮಲೆ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಬಸ್‌ ಪಲ್ಟಿ    ➤ 20ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ)newskadaba.com ತಿರುವಂತಪುರಂ, ಮಾ.29. ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್ ಬಳಿಯ ಎಲವುಂಕಲ್‌‌ನಲ್ಲಿ ಶಬರಿಮಲೆ ಯಾತ್ರಿಗಳು ತೆರಳುತ್ತಿದ್ದ ಬಸ್‌ ಪಲ್ಟಿಯಾಗಿ 20 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಶಬರಿಮಲೆ ದರ್ಶನವನ್ನು ಮುಗಿಸಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿ ಕಮರಿಗೆ ಉರುಳಿದ್ದು, ಪರಿಣಾಮ ತಮಿಳುನಾಡು ಮೂಲದ 9 ಮಕ್ಕಳು ಸೇರಿದಂತೆ ಒಟ್ಟು 64 ಪ್ರಯಾಣಿಕರಲ್ಲಿ 20 ಕ್ಕೂ ಹೆಚ್ಚಿನ ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ. ಇನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಪತ್ತನಂತಿಟ್ಟ ಜನರಲ್ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಲಾಗಿದೆ.

Also Read  ನೀವು ಎಟಿಎಂ ಕಾರ್ಡ್ ಉಪಯೋಗಿಸುತ್ತಿದ್ದೀರಾ..? ► ಶೀಘ್ರದಲ್ಲೇ ನಿಮ್ಮ ಕಾರ್ಡ್ ಬ್ಲಾಕ್ ಆಗಲಿದೆ.‌‌‌. ಕಾರಣವೇನು ಗೊತ್ತೇ...?

 

error: Content is protected !!
Scroll to Top