ಹಾವಿನಿಂದ ಕಚ್ಚಿಸಿಕೊಂಡರೂ ಪರೀಕ್ಷೆ ಬರೆದ ಪಿಯು ವಿದ್ಯಾರ್ಥಿನಿ..!

(ನ್ಯೂಸ್ ಕಡಬ)newskadaba.com  ಭುವನೇಶ್ವರ್‌, ಮಾ.28. ಹಾವಿನಿಂದ  ಕಚ್ಚಿಸಿಕೊಂಡ ಬಳಿಕವೂ ವಿದ್ಯಾರ್ಥಿಯೋರ್ವಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ನಂತರ ಅಸ್ವಸ್ಥಳಾದ ಘಟನೆ ಒಡಿಶಾದ ಕಿಯೋಂಜರ್‌ನಲ್ಲಿ ನಡೆದಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಹಾವು ಕಚ್ಚಿದೆ.  ಆದರೂ ವಿದ್ಯಾರ್ಥಿನಿ ಆಸ್ಪತ್ರೆಗೆ ಹೋಗದೇ ಪರೀಕ್ಷೆ ಬರೆಯಲು ತೆರಳಿದ್ದು, ಪರೀಕ್ಷೆ ಬರೆಯುತ್ತಿದ್ದಾಗಲೇ ಸ್ವಲ್ಪ ಹೊತ್ತಿನಲ್ಲಿ ಆಕೆ ಅಸ್ವಸ್ಥಳಾಗಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Also Read  ನಿಮ್ಮಲ್ಲಿ 2 ರೂ. ನಾಣ್ಯಗಳು ಇವೆಯೇ.‌.‌.? ► ನೀವೂ ಲಕ್ಷಾಧಿಪತಿಗಳಾಗಬಹುದು

 

error: Content is protected !!
Scroll to Top