ಬಸ್ ಸೇತುವೆಗೆ ಡಿಕ್ಕಿ ➤20 ಹಜ್ ಯಾತ್ರಿಕರು ಸಜೀವ ದಹನ

(ನ್ಯೂಸ್ ಕಡಬ) newskadaba.com. ಸೌದಿ, ಮಾ. 28. ನೈಋತ್ಯ ಅರೇಬಿಯಾದಲ್ಲಿ ಮಾರಣಾಂತಿಕ ಬಸ್ ಅಪಘಾತ ಸಂಭವಿಸಿದೆ. ಹಜ್ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 20 ಪ್ರಯಾಣಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದು, ಇನ್ನುಳಿದ 29 ಮಂದಿ ಗಾಯಗೊಂಡಿದ್ದಾರೆ.

ಅಸಿರ್ ಪ್ರಾಂತ್ಯ ಮತ್ತು ಅಭಾ ನಗರವನ್ನು ಸಂಪರ್ಕಿಸುವ ರಸ್ತೆಯಲ್ಲಿ ಈ ದುರಂತ ಘಟನೆ ನಡೆದಿದೆ. ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ತೋರುತ್ತದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಮಕ್ಕಾಗೆ ಹೋಗುತ್ತಿದ್ದಾರೆ.

Also Read  ಸ್ವಾಮೀಜಿಗಳು ರಾಜಕೀಯದಿಂದ ದೂರವಿರುವುದು ಉತ್ತಮ: ಡಿ.ಕೆ.ಶಿವಕುಮಾರ್

ಸೌದಿ ಸಿವಿಲ್ ಡಿಫೆನ್ಸ್ ಮತ್ತು ರೆಡ್ ಕ್ರೆಸೆಂಟ್ ಅಥಾರಿಟಿ ತಂಡಗಳು ಅಪಘಾತದ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತೋರುತ್ತದೆ.

error: Content is protected !!
Scroll to Top