(ನ್ಯೂಸ್ ಕಡಬ)newskadaba.com ತುಮಕೂರು, ಮಾ.28. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ವಿ. ವೆಂಕಟೇಶ್, ಗ್ರೇಡ್-1 ತಹಸೀಲ್ದಾರ್(ಆಡಳಿತಾಧಿಕಾರಿ ಕೆಆರ್‌ಐಡಿಎಲ್) ಗೆ ತುಮಕೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಸಾದಾ ಶಿಕ್ಷೆ ಮತ್ತು ಒಂದೂವರೆ ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ.
ಆರೋಪಿ ವಿ.ವೆಂಕಟೇಶ್, ಆಡಳಿತಾಧಿಕಾರಿ(ತಹಸೀಲ್ದಾರ್ ಗ್ರೇಡ್-1) ಕರ್ನಾಟಕ ರಿನಿವಲಬಲ್ ಎನರ್ಜಿ ಡೆವಲಪ್‌ಮೆಂಟ್ ಲಿಮಿಟೆಡ್, ಪ್ಯಾಲೇಸ್ ರಸ್ತೆ, ಬೆಂಗಳೂರು ಇವರು ತಮ್ಮ ಸೇವಾ ಅವಧಿಯಲ್ಲಿ ಅಂದರೆ ದಿನಾಂಕ 1981 ಡಿಸೆಂಬರ್ 17 ರಿಂದ 2015ರ ಡಿ.29ವರೆಗೆ ಪರಿಶೀಲನಾ ಅವಧಿಯಲ್ಲಿ ತನ್ನ ಹಾಗೂ ತನ್ನ ಪತ್ನಿ, ಮಕ್ಕಳ ಹೆಸರಿನಲ್ಲಿ ಒಟ್ಟು ಆಸ್ತಿ 2,34,55,560 ಗಳಿಸಿದ್ದು, ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರಿನಲ್ಲಿ ಒಟ್ಟು 1,42,55,129 ರು.ಗಳ ಅಕ್ರಮ ಆಸ್ತಿಗಳಿಸಿ, ತಮ್ಮ ಆದಾಯಕ್ಕಿಂತ 72.16ರಷ್ಟುಹೆಚ್ಚಿನ ಆಸ್ತಿಯನ್ನು ಹೊಂದಿದ್ದ ಹಿನ್ನೆಲೆಯಲ್ಲಿ, ಈ ಕುರಿತು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.