ಕಾಸರಗೋಡು: ನಾಪತ್ತೆಯಾಗಿದ್ದ ಶಿಕ್ಷಕ ಬಾವಿಯಲ್ಲಿ ಶವವಾಗಿ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ. 28. ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕರೋರ್ವರ ಮೃತದೇಹ ಕಾಸರಗೋಡು ನಗರದ ಖಾಸಗಿ ಆಸ್ಪತ್ರೆ ಪರಿಸರದ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಮಾನ್ಯ ಜ್ಞಾನೋದಯ ಅನುದಾನಿತ ಶಾಲೆಯ ಶಿಕ್ಷಕ, ಮಟ್ಟನ್ನೂರಿನ ಟಿ.ವಿ. ಪ್ರದೀಪ್ ಕುಮಾರ್(51) ಮೃತ ಪಟ್ಟವರು ಎಂದು ಗುರುತಿಸಲಾಗಿದೆ. ದುರ್ವಾಸನೆ ಉಂಟಾದ ಹಿನ್ನಲೆಯಲ್ಲಿ ಪರಿ ಸರವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಾವಿಯಲ್ಲಿ ಗಮನಿಸಿದಾಗ ಮೃತದೇಹ ಪತ್ತೆಯಾಗಿದೆ. ಕೊನೆಗೆ ತನಿಖೆ ನಡೆಸಿದಾಗ ಅದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕ ಪ್ರದೀಪ್ ಕುಮಾರ್ ರವರ ಮೃತದೇಹ ಎಂದು ಗುರುತು ಪತ್ತೆ ಹಚ್ಚಲಾಯಿತು.

Also Read  ಉಪ್ಪಿನಂಗಡಿ: ಕೋವಿಡ್-19 ಹಿನ್ನಲೆ ತೆಕ್ಕಾರಿನಲ್ಲಿ ಸರಳ ಈದ್ ಮೀಲಾದ್ ಆಚರಣೆ

error: Content is protected !!
Scroll to Top