‘ಮುಷ್ಕರ’ ನಡೆಸಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.28. ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ನೌಕರರು ಮಾರ್ಚ್ 1 ರಂದು ಕಚೇರಿಗೆ ಗೈರು ಹಾಜರಾಗಿ ಮುಷ್ಕರ ನಡೆಸಿದ್ದರು ಎನ್ನಲಾಗಿದೆ.

ಆದರೆ ನೌಕರರ ಬೇಡಿಕೆಗಳಿಗೆ ತಕ್ಷಣವೇ ಸರ್ಕಾರ ಸ್ಪಂದಿಸಿದ ಕಾರಣ ಮುಷ್ಕರವನ್ನು ಹಿಂಪಡೆದು ಮರುದಿನದಿಂದ ಎಂದಿನಂತೆ ನೌಕರರು ಕೆಲಸಕ್ಕೆ ಹಾಜರಾಗಿದ್ದರು.

ಇದೀಗ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಮಾರ್ಚ್ 1ರಂದು ಮುಷ್ಕರ ಮಾಡಿ ಕಚೇರಿಗೆ ಗೈರು ಹಾಜರಾದುದನ್ನು ನೌಕರರ ಹಕ್ಕಿನಲ್ಲಿರುವ ರಜೆ ಅಥವಾ ಪಡೆಯಲು ಅರ್ಹವಿರುವ ರಜೆ ಎಂದು ಪರಿಗಣಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

Also Read  ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ವೀರ ಕಂಬಳ ಸಿನೆಮಾದಲ್ಲಿ ನಟನೆ

 

 

error: Content is protected !!
Scroll to Top