ಮರ್ಧಾಳ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ

(ನ್ಯೂಸ್ ಕಡಬ)newskadaba.com  ಕಡಬ, ಮಾ.28. ಇತಿಹಾಸ ಪ್ರಸಿದ್ಧ ಮರ್ಧಾಳ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣ ಹಾಗೂ ಜೀರ್ಣೋದ್ಧಾರ ಕಾರ್ಯಕ್ಕೆ ಮಾ.27 ಸೋಮವಾರದಂದು ಚಾಲನೆ ನೀಡಲಾಯಿತು.

ದೇವಳದ ಪ್ರಧಾನ ಅರ್ಚಕರಾದ ರಮೇಶ್ ಭಟ್ ಕೆರ್ಮಾಯಿ ನೇತೃತ್ವದಲ್ಲಿ ದೇವರಿಗೆ ಹಾಗೂ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ಕರಸೇವೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಭಟ್ ಪಿಲಿಮಜಲು,  ಉಪಾಧ್ಯಕ್ಷರಾದ ನಾರಾಯಣ ಶೆಟ್ಟಿ ಅತ್ಯಡ್ಕ, ಪೂವಪ್ಪ ಗೌಡ ಪೂಜಾರಿ ಮನೆ, ಪ್ರಧಾನ ಕಾರ್ಯದರ್ಶಿ ಸತೀಶ್ ಕೆ.ಬಸ್ತಿ ಕೊಡೆಂಕಿರಿ, ಜತೆ ಕಾರ್ಯದರ್ಶಿ ವಾಸುದೇವ ಬೈಪಾಡಿತ್ತಾಯ, ಸದಸ್ಯರುಗಳಾದ ಮನೋಹರ ರೈ ಅಲಿಮಾರು ಪಟ್ಟೆ, ಶ್ಯಾಮಪ್ರಸಾದ್ ರೈ ಪಣೆಬೈಲು, ಸತ್ಯನಾರಾಯಣ ಹೆಗ್ಡೆ ನಡುಮಜಲು, ಉಮೇಶ್ ಹೊಸಮನೆ, ಸಲಹಾ ಸಮಿತಿ ಅಧ್ಯಕ್ಷ ಹರೀಶ್ ಕೋಡಂದೂರು ಕಾರ್ಯದರ್ಶಿ ತಿರುಮಲೇಶ್ವರ ಗೌಡ ಕೊಲ್ಯ ಉಪಸ್ಥಿತರಿದ್ದರು. ಸುಮಾರು 500 ಹೆಚ್ಚು ಭಕ್ತಾದಿಗಳು ದೇವಳದ ಕರಸೇವೆಯಲ್ಲಿ ಭಾಗವಹಿಸಿದರು ಎನ್ನಲಾಗಿದೆ.

Also Read  Официальный сайт с лицензией - Акции и бонусы от казино

error: Content is protected !!
Scroll to Top