ಸೇನಾ ಪಡೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಹುದ್ದೆ ಖಾಲಿ..!   ➤ ರಾಜ್ಯಸಭೆಗೆ ಕೇಂದ್ರ ಮಾಹಿತಿ

(ನ್ಯೂಸ್ ಕಡಬ)Newskadaba.comವದೆಹಲಿ: ಮಾ,28. ದೇಶದ ಮೂರೂ ಮಾದರಿಯ ಸೇನಾಪಡೆಗಳಲ್ಲಿ 1.5 ಲಕ್ಷಕ್ಕೂಅಧಿಕ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಕೊರತೆ ತಗ್ಗಿಸುವ ಕ್ರಮಗಳನ್ನು ಸಶಸ್ತ್ರ ಪಡೆಗಳು ನಿಯಮಿತವಾಗಿ ಪರಿಶೀಲಿಸುತ್ತವೆ.

ಖಾಲಿ ಇರುವ ಹುದ್ದೆಗಳ ಭರ್ತಿ ಮತ್ತು ಸೇನೆ ಸೇರಲು ಯುವಕರನ್ನು ಉತ್ತೇಜಿಸುವತ್ತ ಕ್ರಮ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಅಜಯ್ ಭಟ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.ಮೆಡಿಕಲ್ ಹಾಗೂ ಡೆಂಟಲ್ ವಿಭಾಗ ಸೇರಿ ಭೂಸೇನೆಯಲ್ಲಿ 8,129 ಆಫೀಸರ್ಸ್ ಹುದ್ದೆಗಳು ಖಾಲಿ ಇವೆ. ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ 509, ಜೂನಿಯರ್ ಕಮಿಷನ್ಡ್ ಆಫೀಸರ್(ಜೆಸಿಒ) ಮತ್ತು ಇತರೆ ಶ್ರೇಣಿಯ 1,27,673 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.

Also Read  ಕಾಶ್ಮೀರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಭಾರತೀಯ ಯೋಧ ಪತ್ತೆ

 

 

 

 

 

error: Content is protected !!
Scroll to Top