(ನ್ಯೂಸ್ ಕಡಬ)Newskadaba.com ಬೆಂಗಳೂರು ಮಾ,27ಚುನಾವಣಾ ಕಣ ರಂಗೇರುತ್ತಿದ್ದು ಮತದಾರರನ್ನು ಸೆಳೆಯಲು ರಾಜಕಾರಣಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಜನರಿಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದು ಇದೀಗ ನಾಲ್ಕು ಬೇರೆ ಬೇರೆ ಪ್ರಕರಣಗಳಲ್ಲಿ ದಾಖಲೆ ಇಲ್ಲದ ಹಣ ಹಾಗೂ ವಸ್ತುಗಳು ಪತ್ತೆಯಾಗಿವೆ.
ಈಶಾನ್ಯ ವಿಭಾಗದ ಯಲಹಂಕ ಪೊಲೀಸರು ಹಯಗ್ರೀವ ಪಬ್ಲಿಕ್ ಶಾಲೆ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ದಾಸ್ತಾನು ಮಾಡಿದ್ದ 3.60 ಲಕ್ಷ ಮೌಲ್ಯದ 450 ಹೆಲ್ಮೆಟ್, 1.40 ಲಕ್ಷ ಮೌಲ್ಯದ 35 ಕ್ರಿಕೆಟ್ ಸ್ಪೋರ್ಟ್ಸ್ ಕಿಟ್, 25 ಸಾವಿರ ಬೆಲೆ ಬಾಳುವ ಬ್ಲಾಂಕೆಟ್ ಮುಂತಾದ ದಾಖಲೆ ಇಲ್ಲದೇ ಸಿಕ್ಕ ವಸ್ತು ಹಾಗೂ ಹಣ ವಶಕ್ಕೆ ಪಡೆದಿದ್ದಾರೆ.
*ಮತದಾರರಿಗೆ ಹಂಚಲು ಗಿಫ್ಟ್…!*
*➤ ಸಿಕ್ಕಿತು ರಾಶಿ ರಾಶಿ ವಸ್ತು, ಹಣ *