ಟೆಸ್ಟ್ ಡ್ರೈವ್‌ಗೆಂದು ಹೊಸ ಕಾರು ಕೊಂಡೊಯ್ದು ಲಾರಿಗೆ ಡಿಕ್ಕಿ..!   ➤ ಕಂಪನಿ ವಿಧಿಸಿದ ದಂಡಕ್ಕೆ ಸುಸ್ತು  

(ನ್ಯೂಸ್ ಕಡಬ)newskadaba.com ಮಾ,27  ಟೆಸ್ಟ್‌ಡ್ರೈವ್ ಮಾಡಲೆಂದು ಕಾರ್ ಕೊಂಡೊಯ್ದು ವ್ಯಕ್ತಿಯೊಬ್ಬ ಹೊಸ ಕಾರನ್ನು ಹಾನಿಗೊಳಿಸಿದ್ದಾನೆ.ತಮ್ಮ ಹೊಸ ಕಾರುಗಳ ಮಾರಾಟ ಹೆಚ್ಚಿಸಲು ಸದಾ ಗ್ರಾಹಕರನ್ನು ಸೆಳೆಯುವ ಕಂಪನಿಗಳು ಹಾಗೂ ಶೋರೂಂಗಳು ಗ್ರಾಹಕರ ಆಸಕ್ತಿ ಮೇರೆಗೆ ವಾಹನಗಳನ್ನು ಟೆಸ್ಟ್‌ಡ್ರೈವ್‌ಗೆಂದು ನೀಡುತ್ತಾರೆ.

ಈ ವೇಳೆ ಕೆಲವರು ತುಂಬಾ ಉತ್ಸುಕರಾಗಿ ರಸ್ತೆಯಲ್ಲಿ ತಮ್ಮ ಚಾಲನಾ ಕೌಶಲ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಇದು ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.ಏಕೆಂದರೆ ಓಡಿಸುವವರಿಗೆ ಎಷ್ಟೇ ಅನುಭವ ಇದ್ದರೂ ಮಾರುಕಟ್ಟೆಗೆ ಹೊಸದಾಗಿ ಲಗ್ಗೆಯಿಡುವ ವಾಹನಗಳಲ್ಲಿನ ವೈಶೀಷ್ಟ್ಯಗಳ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ.ಇಲ್ಲಿ ಕೂಡ ಅಂತಹದೇ ಘಟನೆ ವರದಿಯಾಗಿದೆ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು ಟೆಸ್ಟ್ ಡ್ರೈವ್‌ಗಾಗಿ ಪಡೆದು ಅಪಘಾತಕ್ಕೆ ಸಿಲುಕಿಸಿದ್ದಾನೆ.

Also Read  ಅಕ್ರಮ ಹಣ ವರ್ಗಾವಣೆ ಆರೋಪ ➤ ಮನೀಶ್ ಸಿಸೋಡಿಯಾ ಇಡಿ ವಶಕ್ಕೆ

ಹೆಚ್ಚಿನ ವೇಗದಲ್ಲಿ ಟೆಸ್ಟ್ ಡ್ರೈವ್ ವಾಹನವನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.ಅದೃಷ್ಟವಶಾತ್ ಮಾರುತಿ ಸುಜುಕಿ ನೆಕ್ಸಾ ಡೀಲರ್‌ಶಿಪ್‌ ಸಿಬ್ಬಂದಿಗೆ ಹಾಗೂ ರಸ್ತೆಯಲ್ಲಿನ ಸಾರ್ವಜನಿಕರಿಗೆ ಯಾವುದೇ ಗಾಯಗಳಾಗಿಲ್ಲ. ಸುರಕ್ಷತಾ ವೈಶಿಷ್ಟ್ಯಗಳನ್ನು ಪರೀಕ್ಷಿಸುವಾಗ ಅಜಾಗರೂಕತೆಯಿಂದ ವಾಹನ ಚಲಾಯಿಸಲಾಗಿದೆ ಎಂದು ಹೇಳಲಾಗಿದ್ದು, ಘಟನೆಯಿಂದ ಉಂಟಾದ ಹಾನಿಗೆ ಸುಮಾರು ರೂ. 1.40 ಲಕ್ಷವನ್ನು ಪಾವತಿಸಲು ಆತನಿಗೆ ಸೂಚಿಸಲಾಗಿದೆ.

 

 

 

error: Content is protected !!
Scroll to Top