ಬಟ್ಟೆ ಅಂಗಡಿಗೆ ಬೆಂಕಿ ➤ ದಂಪತಿ ಸಜೀವ ದಹನ

(ನ್ಯೂಸ್ ಕಡಬ)newskadaba.com ಯಾದಗಿರಿ, ಮಾ.27. ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡು ದಂಪತಿ ಸಜೀವ ದಹನವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ನಡೆದಿದೆ. ಸೈದಾಪುರ ಪಟ್ಟಣದ ಖ್ಯಾತ ಬಟ್ಟೆ ಉದ್ಯಮಿ ರಾಘವೇಂದ್ರ(39) ಮತ್ತು ಅವರ ಪತ್ನಿ ಶಿಲ್ಪಾ(35) ಎಂದು ಗುರುತಿಸಲಾಗಿದೆ.

3 ಮಹಡಿಯ ಮನೆಯ ಕೆಳಮಹಡಿಯಲ್ಲಿ ಮೃತ ದಂಪತಿ ವಾಸಿಸುತ್ತಿದ್ದರು. ಮೇಲಿನ 2 ಮಹಡಿಗಳಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಸುಮಾರು 3 ಕೋಟಿ ರೂ. ಮೌಲ್ಯದ ಬಟ್ಟೆಗಳು ಇದ್ದವು. ವ್ಯಾಪಾರ ಮುಗಿಸಿ ದಂಪತಿ ಮೇಲಿನ ಮಹಡಿಯಲ್ಲಿಯೇ ಮಲಗಿದ್ದರಂತೆ. ಮಕ್ಕಳು ಮತ್ತು ವೃದ್ಧ ತಂದೆ-ತಾಯಿ ಕೆಳಮಹಡಿಯ ಮನೆಯಲ್ಲಿ ಮಲಗಿದ್ದರು.

Also Read  ಸಾಗರ: ಖಾಸಗಿ ಬಸ್ - ಆಟೋ ರಿಕ್ಷಾ ಢಿಕ್ಕಿ ► ಐವರು ಮೃತ್ಯು, ಓರ್ವ ಗಂಭೀರ

 

 

error: Content is protected !!
Scroll to Top