ಉಳ್ಳಾಲ: ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಮೃತ್ಯು

(ನ್ಯೂಸ್ ಕಡಬ)newskadaba.com ಉಳ್ಳಾಲ, ಮಾ.27. ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಎಂಬವರು ಸಾವನ್ನಪ್ಪಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಪ್ರಕಾಶ್ ಅವರು ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗೆ ಕರೆದಿದ್ದರು. ಸುಮಾರು 20ರಷ್ಟು ನೆಂಟರು ಸ್ನೇಹಿತರನ್ನು ಕರೆದುಕೊಂಡು ಪ್ರಕಾಶ್ ಅವರು ತಮ್ಮ ತೋಟದ ಬಳಿಯಿರುವ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು.

ಅಲ್ಲಿ ನದಿ ನೀರಿಗೆ ಅಡಿಕೆ ಮರವನ್ನು ಅಡ್ಡವಾಗಿ ಹಾಕಿದ್ದರು. ಅದರಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಆಕಸ್ಮಿಕ ಕಾಲುಜಾರಿ ಬಿದ್ದು , ನದಿ ನೀರಿನ ಹೂಳಿನಲ್ಲಿ ಹೂತುಹೋಗಿದ್ದರು. ಈಜಲು ಪರಿಣತರಾಗಿದ್ದರೂ ಮೇಲೆ ಬರಲು ಸಾಧ್ಯವಾಗದೇ, ನದಿ ನೀರಿನಲ್ಲಿ ಮುಳುಗಿದ್ದಾರೆ.

Also Read  ಸುಳ್ಯ ಒಡಾಬಾಯಿ ಬಳಿ ಕಾರು ಅಪಘಾತ ➤ ಗಾಯಾಳುಗಳು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು

 

 

error: Content is protected !!
Scroll to Top