(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.27. ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ.
ಕಡಬ ಗ್ರಾಮದ ಲಿಗೋರಿ ಡಿಸೋಜ ಪುತ್ರ ವಿಲ್ಫ್ರೇಡ್ ಡಿಸೋಜ (34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಈತ ಪ್ರಸ್ತುತ ಮಂಗಳೂರು ಕುಲಶೇಖರ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸಿರ್ಲಾ ಪಡ್ಪು ಹೆವೆನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ಈತನ ವಿರುದ್ಧ conviction warrent ಹೊರಡಿಸಿದ ನಂತರ ಆತ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
Also Read ಮಂಗಳೂರು:ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಶ್ವಿನಿ ಹೊಳ್ಳ ►ಅವರಿಗೆ ಐಇಇಇ ಅತ್ಯುತ್ತಮ ಘಟಕ ಕೌನ್ಸಿಲರ್ ಗೌರವ