ಬಶೀರ್ ಅಂತ್ಯಕ್ರಿಯೆಗೆ ಹರಿದು ಬಂತು ಜನಸಾಗರ ► ಸರ್ವ ಧರ್ಮೀಯರಿಂದ ಅಂತಿಮ ವಿದಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07. ನಗರದ ಹೊರವಲಯದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಎಂಬಾತನ ಹತ್ಯೆಗೆ ಪ್ರತೀಕಾರವಾಗಿ ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ನಡೆದ ಮಾರಣಾಂತಿಕ ಹಲ್ಲೆಯಿಂದ ಮೃತಪಟ್ಟ ಬಶೀರ್ ಅಂತ್ಯಕ್ರಿಯೆ ಇಂದು ಸಂಜೆ ಕೂಳೂರಿನಲ್ಲಿ ನಡೆಯಿತು.

ಬಶೀರ್ ರವರ ಪುತ್ರ ಸಂಜೆ‌ 06 ಗಂಟೆ ವೇಳೆಗೆ ವಿದೇಶದಿಂದ ಆಗಮಿಸಿದ್ದು, 7 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಿತು. ಇಂದು ಮಧ್ಯಾಹ್ನದಿಂದಲೇ ಹಲವಾರು ಜನರು ಕೂಳೂರು ಮಸೀದಿಗೆ ಆಗಮಿಸಿದ್ದರು. ಸರ್ವಧರ್ಮದ ಹಲವರು ಮೃತರ ಅಂತಿಮ ದರ್ಶನ ಪಡೆದರು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಜನಸಾಗರವೇ ನೆರೆದಿತ್ತು.

Also Read  ಬಂಟ್ವಾಳ: ಯಕ್ಷಗಾನ ನೋಡಲು ಹೋದ ವ್ಯಕ್ತಿ ಶವವಾಗಿ ಪತ್ತೆ

error: Content is protected !!
Scroll to Top