ಅಪಘಾತವಾದ ಕಾರಿನಲ್ಲಿ ಸಿಟಿ ರವಿ ಫೋಟೋ ಇರುವ ಕ್ಯಾಲೆಂಡರ್, ಮದ್ಯ, ಮಾರಕಾಸ್ತ್ರ ಪತ್ತೆ

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಮಾ.27. ಅಪಘಾತಕ್ಕೀಡಾದ ಕಾರಿನಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿಯ ಭಾವಚಿತ್ರವುಳ್ಳ ಕ್ಯಾಲೆಂಡರ್, ತಲವಾರು ಮತ್ತು ಮದ್ಯದ ಪ್ಯಾಕೇಟ್ ಗಳು ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್‌ನಲ್ಲಿ ನಡೆದಿದೆ.


ಕಾರುವೊಂದರ ಬ್ರೇಕ್ ಡೌನ್‌ ಆಗಿದೆ. ಈ ವೇಳೆ ಕಾರನ್ನು ತಳ್ಳಲು ಮುಂದಾದಾಗ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ.ಆ ಸಂದರ್ಭ ಕಾರಿನ ಒಳಗೆ ನೋಡಿದಾಗ ಅದರಲ್ಲಿ ಮದ್ಯದ ಪ್ಯಾಕೇಟ್ ಗಳು, ಮಾರಕಾಸ್ತ್ರ ಮತ್ತು ಸಿ.ಟಿ.ರವಿಯ ಫೋಟೋ ಇರುವ ಕ್ಯಾಲೆಂಡರ್ ಪತ್ತೆಯಾಗಿವೆ ಎಂದು ವರದಿಯಾಗಿದೆ.

Also Read  ಸುಳ್ಯ: ಕಾರುಗಳ ನಡುವೆ ಢಿಕ್ಕಿ ➤ ಪ್ರಯಾಣಿಕರು ಪಾರು..!

error: Content is protected !!
Scroll to Top