ಬ್ಯಾಂಕ್ ಬಡ್ಡಿ ದರ ಶೇ.0.25 ಹೆಚ್ಚಳ ಸಾಧ್ಯತೆ ➤ಆರ್‌ಬಿಐ

(ನ್ಯೂಸ್ ಕಡಬ) newskadaba.com. ನವದೆಹಲಿ, ಮಾ. 27. ಗೃಹ, ವಾಹನ ಸಾಲ ಇರುವವರಿಗೆ ಸದ್ಯದಲ್ಲೇ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆಯಿದೆ. ಮುಂದಿನ ವಾರ ಅಂದರೆ ಏ. 3, 5 ಮತ್ತು 6ರಂದು ಆರ್‌ಬಿಐ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಯಲಿದ್ದು, ಮತ್ತೂಂದು ಸುತ್ತಿನ ಬಡ್ಡಿ ದರ ಏರಿಕೆ ಘೋಷಣೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ.6ಕ್ಕಿಂತಲೂ ಮೇಲಿರುವ ಕಾರಣ ಮತ್ತು ಜಾಗತಿಕ ತಲ್ಲಣಗಳು ಮುಂದುವರಿದಿರುವ ಕಾರಣ, ಆರ್‌ಬಿಐ ಮತ್ತೆ ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.25ರಷ್ಟು ಏರಿಕೆ ಮಾಡಲಿದೆ ಎಂದು ಹೇಳಲಾಗಿದೆ. ಫೆಬ್ರವರಿಯಲ್ಲಿ ಕೂಡ ಬಡ್ಡಿ ದರವನ್ನು ಶೇ.0.25 ಹೆಚ್ಚಳ ಮಾಡಲಾಗಿತ್ತು. ಇದರಿಂದ ರೆಪೋ ದರ ಶೇ.6.50ಕ್ಕೆ ಏರಿಕೆಯಾಗಿತ್ತು.

Also Read  ಇಂದಿನಿಂದ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭ

 

error: Content is protected !!
Scroll to Top