`ನರೇಗಾ’ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ  ಗುಡ್ ನ್ಯೂಸ್   ➤ರಾಜ್ಯದಲ್ಲಿ ಕೂಲಿ ದರ ದಿನಕ್ಕೆ 316 ರೂ.ಗೆ ಏರಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು : ಮಾ27, ನರೇಗಾ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ‘ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯಲ್ಲಿ ಕಾರ್ಮಿಕರಿಗೆ ನೀಡಲಾಗುವ ಕೂಲಿ ದರವನ್ನು ರಾಜ್ಯದಲ್ಲಿ ದಿನಕ್ಕೆ 7 ರೂ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ದಿನಕ್ಕೆ 309 ರೂ.ಗಳಿದ್ದ ಕೂಲಿಯ ದರವನ್ನು 316 ರೂ.ಗೆ ಗಳಿಗೆ ಹೆಚ್ಚಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಶೇ. 2.27 ರಷ್ಟು ಹೆಚ್ಚಳವಾಗಿದ್ದು, ಇದು ಏಪ್ರೀಲ್ 1 ರಿಂದ ಜಾರಿಯಾಗಲಿದೆ.

ದೇಶದಾದ್ಯಂತ 7 ರೂ.ನಿಂದ 26 ರೂ.ವರೆಗೆ ಕೂಲಿ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿಯ ದರ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿದೆ. ಅತಿ ಹೆಚ್ಚಿನ ದರ ಹರಿಯಾಣದಲ್ಲಿ ನೀಡಲಾಗುತ್ತಿದ್ದು, ದಿನಕ್ಕೆ 357 ರೂ.ಗಳಾಗಿವೆ.

Also Read  ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗೆ ಉತ್ತಮ ಫಲಿತಾಂಶ

 

 

 

error: Content is protected !!
Scroll to Top