ಅಕ್ರಮ‌ ಸಂಬಂಧ- ಕರುಳಕುಡಿಗಳನ್ನೇ ಕೊಂದ ಮಹಾತಾಯಿ

Crime

(ನ್ಯೂಸ್ ಕಡಬ) newskadaba.com ಮೀರತ್, ಮಾ. 26. ಪ್ರೀತಿಯ ವ್ಯಾಮೋಹಕ್ಕೆ ಸಿಲುಕಿದ ಮಹಾತಾಯಿಯೋರ್ವಳು ತನ್ನ ಕರುಳ ಕುಡಿಗಳನ್ನೇ ನಿರ್ದಯಿಯಾಗಿ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

ಸ್ಥಳೀಯ ಕೌನ್ಸಿಲರ್ ಆಗಿರುವ ಸೌದ್ ಎಂಬಾತನೊಂದಿಗೆ ಅಕ್ರಮ ಸಂಪರ್ಕ ಹೊಂದಿದ್ದ ಈಕೆ, 10 ವರ್ಷದ ಮಗ ಹಾಗೂ ಆರು ವರ್ಷದ ಮಗಳನ್ನು ಕೊಂದು ಹಾಕಿ ನಂತರ ಮೃತದೇಹಗಳನ್ನು ಕಾಲುವೆಗೆ ಎಸೆದಿದ್ದಳು. ಈ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಇದುವರೆಗೂ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ ತಾಯಿಯ ಮೇಲೆ ಅನುಮಾನಗೊಂಡ ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.

Also Read  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಯುವಕ ➤ಮುಂಬೈ ಪೊಲೀಸರಿಂದ ರಕ್ಷಣೆ!

error: Content is protected !!
Scroll to Top