ಕಡಬ: ಆಸ್ಪತ್ರೆಗೆಂದು ತೆರಳಿದ್ದ ವ್ಯಕ್ತಿ ನಾಪತ್ತೆ ➤ ಪತ್ತೆಗಾಗಿ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಮಾ. 26. ವಿದ್ಯುತ್ ಬಿಲ್ಲು ಪಾವತಿಗೆ ಹಾಗೂ ಔಷಧಿಗೆಂದು ಮನೆಯಿಂದ ತೆರಳಿದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರನ್ನು ಕಡಬ ತಾಲೂಕಿನ ಐತ್ತೂರು ಗ್ರಾಮದ ಎಡೆಂಜ ನಿವಾಸಿ ನಾಗರಾಜ (65) ಎಂದು ಗುರುತಿಸಲಾಗಿದೆ. ನಾಗರಾಜರವರು ಮಾ. 20ರಂದು ಬೆಳಿಗ್ಗೆ 9.30 ಕ್ಕೆ ಮನೆಯಿಂದ ವಿದ್ಯುತ್ ಬಿಲ್ಲು ಪಾವತಿಸಲು ಹಾಗೂ ಆಸ್ಪತ್ರೆಗೆ ಜೌಷಧಿಗೆಂದು ತೆರಳಿದವರು ಈವರೆಗೆ ಮನೆಗೆ ಹಿಂತಿರುಗಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಪರಿಸರಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರುವುದಿಲ್ಲ. ಇವರನ್ನು ಪತ್ತೆ ಮಾಡಿಕೊಡುವಂತೆ ನಾಗರಾಜ ಅವರ ಪತ್ನಿ ಶಿವಮ್ಮ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.

Also Read  ವಿದ್ಯಾರ್ಥಿ ವೇತನ ತಂತ್ರಾಂಶ ಅರ್ಜಿ – ಅವಧಿ ವಿಸ್ತರಣೆ

error: Content is protected !!
Scroll to Top