ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರಕಿತ್ತು ಪರಾರಿ ➤ ಪ್ರಕರಣ ದಾಖಲು

Theft, crime, Robbery

(ನ್ಯೂಸ್ ಕಡಬ) newskadaba.com ಶಿರ್ವ, ಮಾ. 26. ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರಿಬ್ಬರು, ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ.

ಶಿರ್ವ ಸೊರ್ಪು ನಿವಾಸಿ ಎಮಿಲಿಯನ್ ಸಲ್ದಾನ (64) ಎಂಬವರು ಚರ್ಚ್‌‌ನಲ್ಲಿ ಪೂಜೆ ಮುಗಿಸಿ ತುಂಡುಬಲ್ಲೆ ಬಳಿ ಬಸ್ಸಿನಿಂದಿಳಿದು ಮನೆ ಕಡೆ ಒಬ್ಬರೇ ತೆರಳುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿ ಕಪ್ಪು ಬೈಕ್ ನಲ್ಲಿ ಬಂದ ಯುವಕರಿಬ್ಬರ ಪೈಕಿ, ಓರ್ವ ಮಹಿಳೆಯ ಬಳಿ ಬಂದು ಚೀಟಿ ತೋರಿಸಿ ವಿಳಾಸ ಕೇಳಿದ್ದಾನೆ. ಮಹಿಳೆ ಇಲ್ಲವೆಂದು ಹೇಳಿ ಮುಂದೆ ಹೋದಾಗ ಹಿಂದಿನಿಂದ ಬಂದು ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 12 ಗ್ರಾಮ್ ತೂಕದ ಕ್ರಾಸ್ ಪೇಂಡೆಂಟ್ ಇರುವ ಚಿನ್ನದ ಸರವನ್ನು ಎಳೆದಿದ್ದಾನೆ. ಆಗ ಮಹಿಳೆ ಜೋರಾಗಿ ಬೊಬ್ಬೆ ಹೊಡೆದಿದ್ದು ಸವಾರರಿಬ್ಬರೂ ತುಂಡುಬಲ್ಲೆ ಮುಖ್ಯರಸ್ತೆಯ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮಹಿಳೆ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಕ್ಕಾ ಮಸೀದಿಯ ಅವಹೇಳನ ಪ್ರಕರಣ ► ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಡಬದಲ್ಲಿ ಮೌನ ಪ್ರತಿಭಟನೆ

error: Content is protected !!
Scroll to Top