SBI ಗ್ರಾಹಕರಿಗೆ ಉಚಿತವಾಗಿ ಸಿಗುತ್ತೆ ಈ 10 ಸೇವೆ.!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.25. ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ತನ್ನ ಗ್ರಾಹಕರಿಗೆ ಮೊಬೈಲ್ ಮೂಲಕವೇ ಪಡೆಯಬಹುದಾದ ಅನೇಕ ಸೇವೆಗಳನ್ನು ಉಚಿತವಾಗಿ ಕೊಡ ಮಾಡುತ್ತಿದೆ.

ಎಸ್‌ಬಿಐ ಕ್ವಿಕ್ – ಮಿಸ್ಡ್‌ ಕಾಲ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಅಕೌಂಟ್ ಬ್ಯಾಲೆಕ್ಸ್‌, ಮಿನಿ ಸ್ಟೇಟ್ಮೆಂಟ್ ಸೇರಿದಂತೆ ಅನೇಕ ವಿಚಾರಗಳನ್ನು ನಿಮ್ಮ ನೋಂದಾಯಿತ ಮೊಬೈಲ್‌ನಿಂದ ಎಸ್‌ಎಂಎಸ್ ಕಳಿಸುವ ಮೂಲಕ ಪಡೆಯಬಹುದಾಗಿದೆ ಎಂದು ವರದಿಯಾಗಿದೆ.

ಸೇವೆಗಳ ಪಟ್ಟಿ ಇಂತಿದೆ:

ಬ್ಯಾಲೆನ್ಸ್ ವಿಚಾರಣೆ

919223766666ಗೆ ಮಿಸ್ಡ್‌ ಕಾಲ್ ಅಥವಾ ‘BAL’ ಎಂದು ಎಸ್‌ಎಂಎಸ್ ಮಾಡಬೇಕು.

ಮಿನಿ ಸ್ಟೇಟ್ಮೆಂಟ್

919223766666ಗೆ ಮಿಸ್ಡ್‌ ಕಾಲ್ ಅಥವಾ ‘MSTMT’ ಎಂದು ಎಸ್‌ಎಂಎಸ್ ಮಾಡಬೇಕು.

Also Read  ’ವಚನ ದರ್ಶನ’ ಪುಸ್ತಕ ಬಿಡುಗಡೆ ವಿರೋಧ       ಪ್ರಗತಿಪರ ಲಿಂಗಾಯುತ ನಾಯಕರ ಪ್ರತಿಭಟನೆ    

ಚೆಕ್ ಬುಕ್ ವಿನಂತಿಯ ಸ್ವೀಕೃತಿ

917208933145ಗೆ “CHQREQ” ಎಂದು ಎಸ್‌ಎಂಎಸ್ ಮಾಡಬೇಕು.

ಚೆಕ್‌ಬುಕ್ ವಿನಂತಿ

917208933145ಗೆ “CHQREQ” ಎಂದು ಎಸ್‌ಎಂಎಸ್ ಮಾಡಬೇಕು.

ಕಳೆದ ಆರು ತಿಂಗಳ ಇ-ಸ್ಟೇಟ್ಮೆಂಟ್

ಕಳೆದ ಆರು ತಿಂಗಳ ಇ-ಸ್ಟೇಟ್ಮೆಂಟ್‌ ಅನ್ನು ನಿಮ್ಮ ನೋಂದಾಯಿತ ಇ-ಮೇಲ್ ವಿಳಾಸಕ್ಕೆ ಪಾಸ್‌ವರ್ಡ್ ರಕ್ಷಿತ ಪಿಡಿಎಫ್ ಫೈಲ್ ಮೂಲಕ ಕಳುಹಿಸಲಾಗುವುದು. ಇದಕ್ಕಾಗಿ ನೀವು ‘ESTMT ಎಂದು 917208933145ಗೆ ಎಸ್‌ಎಂಎಸ್‌ ಮಾಡಬೇಕು.

ಶಿಕ್ಷಣ ಸಾಲದ ಬಡ್ಡಿಯ ಪ್ರಮಾಣ ಪತ್ರ

917208933145ಗೆ ELI ಎಂದು ಎಸ್‌ಎಂಎಸ್ ಮಾಡಬೇಕು.

ಮನೆ ಸಾಲ ಬಡ್ಡಿ ಪ್ರಮಾಣ ಪತ್ರ

917208933145ಗೆ HLI ಎಂದು ಎಸ್‌ಎಂಎಸ್ ಮಾಡಬೇಕು.

Also Read  ಸಿಲಿಂಡರ್ ಕಳವು ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್

ಸಕಾರಾತ್ಮಕ ಪಾವತಿ ವ್ಯವಸ್ಥೆಗೆ (ಪಿಪಿಎಸ್‌) ನೋಂದಾಯಿತರಾಗಲು

ಈ ವ್ಯವಸ್ಥೆಯನ್ನು ಬಳಸಲು ಮೊದಲಿಗೆ ‘ಒನ್ ಟೈಂ’ನೋಂದಣಿಯಾಗಬೇಕು. ಬಳಿಕ ಮೊಬೈಲ್ ಮೂಲಕ ಪಿಪಿಎಸ್‌ ಸೇವೆಗಳನ್ನು ಪಡೆಯಬಹುದು.

error: Content is protected !!
Scroll to Top