(ನ್ಯೂಸ್ ಕಡಬ)newskadaba.com ಉಳ್ಳಾಲ, ಮಾ.25. ಮೊಬೈಲ್ ಶೋರೂಂ ವೊಂದರಲ್ಲಿ ಕೆಲಸಕ್ಕಿದ್ದ ಕುಂಪಲ ಮೂರು ಕಟ್ಟೆ ನಿವಾಸಿ ಯುವಕನೊಬ್ಬ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಅಕ್ಷಯ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ತಾಯಿ ಬೀಡಿ ಬ್ರಾಂಚಿಗೆ ತೆರಳಿದ್ದ ವೇಳೆ ಮನೆಯ ಕಿಟಕಿಗೆ ಬೈರಾಸಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತೊಕ್ಕೊಟ್ಟಿನ ಅನು ಮೊಬೈಲ್ ಸೆಂಟರಲ್ಲಿ ಕೆಲಸಕ್ಕಿದ್ದು ಕಳೆದ 20 ದಿನಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದರು. ಮೊಬೈಲ್ ಶಾಪ್ ಮಾಲಕರು ಕರೆ ಮಾಡಿದರೂ ಅಕ್ಷಯ್ ಕರೆ ಸ್ವೀಕರಿಸುತ್ತಿರಲಿಲ್ಲ ಎಂದು ತಿಳಿದುಬಂದಿದೆ.